ಬೀದರ ನಗರದ ಹೊರವಲಯದ ಮರಕಲ್ ಗ್ರಾಮದಲ್ಲಿ 19ನೇ ಪಾರಥೆನಿಯಂ ಜಾಗೃತ ಸಪ್ತಾಹ
ನಡೆಸಿದ ICAR ಕೃಷಿ ವಿಜ್ಞನಾ ಕೇಂದ್ರ ಬೀದರ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ರಾಯಚೂರ್ ICAR ಕೃಷಿ ವಿಜ್ಞನಾ ಕೇಂದ್ರ ಬೀದರ ವತಿಯಿಂದ ಅಗಸ್ಟ್ 16 ರಿಂದ 22 ವರೆಗೆ ಬೀದರ ನಲ್ಲಿ ಏರ್ಪಡಿಸಲಾದ 19ನೇ ಪಾರಥೆನಿಯಂ ಜಾಗೃತ ಸಪ್ತಾಹ ಅಂಗವಾಗಿ ಇಂದು ಬೀದರ ನಗರದ ಹೋರವಲಯದಲ್ಲಿ ಬರುವ ಮರಕಲ್ ಗ್ರಾಮ ಪಂಚಾಯತಿ ನಲ್ಲಿ ಬೀದರ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿಗಳಾದ ಜ್ಞಾನದೇವ್ ಬುಳ್ಳಾ, ಹಾಗೂ ಮಲ್ಲಿಕಾರ್ಜುನ ನಿಂಗದಳ್ಳಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿ ಕೊಳ್ಳಲಾಯಿತು ಈ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಿಗಳು ರೈತರ ಹೊಲದಲ್ಲಿ ಕಳೆಯ ಜೋತೆ ಬೇಳೆಯುವ ಪಾರಥೆನಿಯಂ ಕಳೆಯಿಂದ ಆಗುವ ದುಷ್ಪರಿಣಾಮ ಗಳು ಪಾರಥೆನಿಯಂ ಕಳೆಯ ನಿರ್ವಹಣೆ ಬಗ್ಗೆ ರೈತರಿಗೆ ವಿವರಿಸಿ ಪಾರಥೆನಿಯಂ ಕಳೆವು ಗ್ರಾಮದ ಖಾಲಿ ಜಾಗದಲ್ಲಿ ಅತ್ಯಂತ ವೇಗವಾಗಿ ಬೆಳೆಯುವ ಕಳೆಯಾಗಿದೆ ಇದರಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವದು ಆದರಿಂದ ಗ್ರಾಮಾಧಿಕಾರಿಗಳಿಗು ಕೂಡಾ ಗ್ರಾಮದಲ್ಲಿ ಇದನ್ನು ಹರಡದಂತೆ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಿಸಿದ ವಿಜ್ಞಾನಿಗಳು ಬೀದರ ಜಿಲ್ಲೆಯನ್ನು ಸಂಪೂರ್ಣವಾಗಿ ಪಾರಥೆನಿಯಂ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕೆಂದು ಕರನೀಡಿದರು





