Google search engine
ಮನೆUncategorizedಹರಿಕಾರರಾದ ಡಿ. ದೇವರಾಜ ಅರಸುರವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ನಗರದಲ್ಲಿ ಬಲು ವಿಜೃಂಭಣೆಯಿಂದ ಆಚರಿಸಲಾಯಿತು

ಹರಿಕಾರರಾದ ಡಿ. ದೇವರಾಜ ಅರಸುರವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ನಗರದಲ್ಲಿ ಬಲು ವಿಜೃಂಭಣೆಯಿಂದ ಆಚರಿಸಲಾಯಿತು

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಲಬುರಗಿ ಹಾಗೂ ಇತರೆ ಇಲಾಖೆಗಳ ಸಹಯೋಗದಲ್ಲಿ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಿಂದುಳಿದ ವರ್ಗಗಳ ಪರಿವರ್ತನೆಯ ಹರಿಕಾರರಾದ ಡಿ. ದೇವರಾಜ ಅರಸುರವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ನಗರದಲ್ಲಿ ಬಲು ವಿಜೃಂಭಣೆಯಿಂದ ಆಚರಿಸಲಾಯಿತು.

ಇಂದು ಕಲಬುರಗಿ ನಗರದಲ್ಲಿರುವ ಎಸ್ ಎಮ್ ಪಂಡಿತ ರಂಗ ಮಂದಿರದಲ್ಲಿ ಹಮ್ಮಿಕೊಂಡ ಡಿ. ದೇವರಾಜ ಅರಸುರವರ 109ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ವಿವಿಧ ಅತಿಥಿ ಗಣ್ಯರ ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ಜ್ಯೋತಿ ಬೆಳಗಿಸಿ, ಅರಸುರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ನಂತರ ಮಾತನಾಡಿದ ಎಂಎಲ್’ಸಿ ತಿಪ್ಪಣ್ಣಪ್ಪ ಕಮಕನೂರ ಅವರು ದೇವರಾಜ ಅರಸುರವರು ಕೊಟ್ಟಂತಹ ಕೊಡುಗೆಗಳು ಬಹಳ ಅಪಾರವಾದದ್ದೂ, ಆದ್ದರಿಂದ ಅರಸುರವರ ಭವನವನ್ನು ಪ್ರತಿಯೊಂದು ತಾಲೂಕಿನಲ್ಲಿ ನಿರ್ಮಾಣವಾಗುವ ಕೆಲಸವಾಗಬೇಕು ಹಾಗೂ ಮುಂದಿನ ದಿನಗಳಲ್ಲಿ ದೇವರಾಜ ಅರಸುರವರ ವಿಚಾರಗಳು, ಎಲ್ಲಾ ನಡೆನುಡಿಗಳನ್ನು ನಾವೆಲ್ಲರೂ ಪ್ರೇರಣೆಯಾಗಿ ತೆಗೆದುಕೊಳ್ಳಬೇಕು ಎಂದರು. ತದನಂತರ ಮಾತನಾಡಿದ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ನಮ್ಮ ದೇಶಕ್ಕೆ ಸ್ವತಂತ್ರ ಬಂದಮೇಲೆ ಅನೇಕ ರಾಜಕಾರಣಿಗಳು ಬಂದು ಹೋಗಿದ್ದಾರೆ ಅಂಥದರಲ್ಲಿ ಪ್ರಮುಖ ರಾಜಕಾರಣಿಗಳೆಂದರೆ ಅದು ಇಬ್ಬರೇ ಒಬ್ಬರು ನಿಜಲಿಂಗಪ್ಪಾ ಮತ್ತು ದೇವರಾಜ ಅರಸುರವರು, ಅದರಲ್ಲಿ ಸರ್ವ ಹಿಂದುಳಿದ ವರ್ಗಗಳ ಜನರ ಏಳಿಗೆಗಾಗಿ ಅರಸುರವರು ದುಡಿದಿದ್ದಾರೆ ಎಂದಿದ್ದಾರೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!