Home Uncategorized ಟೀಕೆಗಳು ಸಾಯುತ್ತವೆ ನಮ್ಮ ಕೆಲಸಗಳು ಉಳಿಯುತ್ತವೆ; ಡಿ.ಕೆ ಶಿವಕುಮಾರ್

ಟೀಕೆಗಳು ಸಾಯುತ್ತವೆ ನಮ್ಮ ಕೆಲಸಗಳು ಉಳಿಯುತ್ತವೆ; ಡಿ.ಕೆ ಶಿವಕುಮಾರ್

0

ಆರ್ಟಿಕಲ್ 371 (J) ಜೆ ಬಂದು ಹತ್ತು ವರ್ಷಗಳಾಗಿದ್ದು ಅದನ್ನು ಸಂಭ್ರಮಿಸುವ ಘಳಿಗೆ ಬಂದಿದೆ, ವಿರೋಧ ಪಕ್ಷದ ನಾಯಕರನ್ನೂ ಕರೆಯಿಸಿ ಒಂದು ಕಾರ್ಯಕ್ರಮ ಮಾಡುತ್ತೇವೆ ಎಂದು ಕಲಬುರಗಿಯಲ್ಲಿ ಡಿಸಿಎಂ ಡಿಕೆ. ಶಿವಕುಮಾರ ಅವರು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಂಮತ್ರಿ ಡಿ.ಕೆ ಶಿವಕುಮಾರ್ ಅವರು ಟೀಕೆಗಳು ಸಾಯುತ್ತವೆ ನಮ್ಮ ಕೆಲಸಗಳು ಉಳಿಯುತ್ತವೆ, 60 ವರ್ಷದ ಟಿಬಿ ಡ್ಯಾಂ ಚೈನ್ ಲಿಂಕ್ ಆಕಸ್ಮಿಕವಾಗಿ ಕಟ್ಟಾಗಿದೆ, ಆದರೆ ಬಿಜೆಪಿ ನಾಯಕರು ಆ ಘಟನೆಯ ಬಗ್ಗೆ ನಮ್ಮ ಮೇಲೆ ಗಧಾ ಪ್ರಹಾರ ಮಾಡಿದ್ರೂ, ಆದರೆ ನಾವು ರಾತ್ರೋರಾತ್ರಿ ಅಧಿಕಾರಿಗಳನ್ನ ಕರೆಯಿಸಿ ಅದನ್ನ ಪರಿಶೀಲನೆ ಮಾಡಿಸಿ ಮತ್ತೆ ಅದನ್ನ ಐದೇ ದಿನಗಳಲ್ಲಿ ರಿಪೇರಿ ಮಾಡಿಸಿ ಮತ್ತೇ ನೀರು ಸಂಗ್ರಹಣೆಯಾಗುವಂತೆ ಮಾಡಿದ್ದೇವೆ. ಡ್ಯಾಂ ಅನ್ನು ನಾವು ಉಳಿಸಿಕೊಂಡಿದ್ದೇ ಒಂದು ಪವಾಡ, ಹಾಗೆ ಉಳಿಸಿಕೊಂಡಿದ್ದೇವೆ. ನೀರು ಉಳಿಸಬೇಕು ರೈತರನ್ನ ಕಾಪಾಡುವಂತಹ ಕೆಲಸ ಮಾಡಬೇಕಾಗಿತ್ತು, ಆದರೆ ಇವಾಗ ಮತ್ತೆ ಮಳೆ ಬರ್ತಿದೆ ಚೆನ್ನಾಗಿ ನೀರು ಶೇಖರಣೆ ಆಗ್ತಿದೆ. ರಿಪೇರಿ ಕಾರ್ಯದಲ್ಲಿ ಕೈ ಜೋಡಿಸಿದ ಕಟ್ಟ ಕಡೆಯ ವ್ಯಕ್ತಿಗೂ ನಮ್ಮ ಸರ್ಕಾರ ಸನ್ಮಾನ ಮಾಡುತ್ತೆ ಎಂದಿದ್ದಾರೆ.

LEAVE A REPLY

Please enter your comment!
Please enter your name here

error: Content is protected !!