ಸನ್ಮಾನ್ಯ ಮುಖ್ಯಮಂತ್ರಿಗಳ ವಿರುದ್ಧ ರಾಜ್ಯಪಾಲರು ನೀಡಿರುವ ನೋಟಿಸ್ ಇಂಪಾಡೆಯುವಂತೆ ಒತ್ತಾಯಿಸಿ ಚಿಂಚೋಳಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ಪ್ರತಿಭಟನೆ ಮಾಡಲಾಯಿತು.
ಚಂದಾಪುರ ಪಟ್ಟಣದ ಕನಕ ವೃತ್ತದಿಂದ ತಹಸೀಲ್ದಾರ್ ಕಾರ್ಯಾಲಯದ ವರೆಗೆ ಬೃಹತ್ ಪ್ರತಿಭಟನೆ ಮಾಡುವುದರ ಮೂಲಕ ತಹಸೀಲ್ದಾರ್ ಅವರಿಗೆ ಮನವಿ ಪತ್ರ ನೀಡಿದರು.
ಪ್ರತಿಭಟನೆ ಉದ್ದೇಶಿಸಿ ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷರು ಸುಭಾಷ್ ರಾಠೋಡ್ ಮಾತನಾಡಿ ಬಿಜೆಪಿ ನಾಯಕರ ಕುತಂತ್ರಕ್ಕೆ ಮಣೆಯಾದ ನಮ್ಮ ಅಹಿಂದ ನಾಯಕರಾದ ಸಿದ್ದರಾಮಯ್ಯ ನವರ ವಿರುದ್ಧ ರಾಜ್ಯಪಾಲರು ನೀಡಿರುವ ನೋಟಿಸ್ ಹಿಂಪಡೆಯಬೇಕು ಎಂದು ಅಗ್ರಹಿಸಿದರು.
ಕೂಲಿ ಸಮಾಜದ ರಾಜ್ಯಕಾರ್ಯದರ್ಶಿ ಲಕ್ಶ್ಮಣ ಅವುಂಟಿ ಮಾತನಾಡಿ ಬಿಜೆಪಿ ಸರಕಾರದಲ್ಲಿ ಎಷ್ಟೊಂದು ಹಗರಣಗಳು ಆದರೂ ಕಣ್ಮುಚ್ಚಿ ಕುಳಿತ ರಾಜ್ಯಪಾಲರು, ಈಗಿನ ಕಾಂಗ್ರೆಸ್ ಸರಕಾರದಲ್ಲಿ ಯಾವುದೊ ಒಬ್ಬ ಅನಾಮಿಕ ನೀಡಿದ ದೂರಿನ ಮೇಲೆ ಮುಖ್ಯ ಮಂತ್ರಿ ಗಳಿಗೆ ನೋಟಿಸ್ ನೀಡಿರುವುದು ಖಂಡನಿಯ ಕೂಡಲೆ ನೋಟಿಸ್ ಹಿಂಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಲಕ್ಶ್ಮಣ ಅವುಂಟಿ,ಅಬ್ದುಲ್ ಬಸಿದ್,ಹಣಮಂತ ಪೂಜಾರಿ, ಸಂತೋಷ್ ಗುತ್ತೇದಾರ, ಅನಿಲ್ ಜಮಾದಾರ್, ತುಕಾರಾಮ್ ಪವಾರ್, ಸುರೇಶ ಬಂಟ ಇನ್ನಿತರ ಕಾಂಗ್ರೆಸ್ ಮುಖಂಡರು ಇದ್ದರು





