ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸರ್ವ ಸಮಾಜ ಕಲ್ಯಾಣ ಸಮಿತಿ ನಿಂಬರ್ಗಾ ಅಧ್ಯಕ್ಷರಾದ ವಿಠ್ಠಲ್ ಸಿ ಕೋಣೆಕರ್ ಅವರು ನಿಂಬರ್ಗಾ ಗ್ರಾಮ ಪಂಚಾಯತಿಯು 24 ಜನ ಚುನಾಯಿತ ಸದಸ್ಯರು ಹೊಂದಿರುವ ದೊಡ್ಡ ಗ್ರಾಮ ಪಂಚಾಯತಿಯಾಗಿದ್ದು, ಅನೇಕ ಮೂಲಭೂತ ಸೌಕರ್ಯವಿಲ್ಲದೇ ಇಲ್ಲಿನ ಜನರು ವಂಚಿತರಾಗಿದ್ದಾರೆ, ಗ್ರಾಮ ಪಂಚಾಯತಿ ಚುನಾಯಿತ ಸದಸ್ಯರು ತಮ್ಮ ವಾರ್ಡ್ ಹಾಗೂ ಗ್ರಾಮದ ಸಮಸ್ಯೇಗಳನ್ನು ಆಲಿಸಿ ಬಗೆಹರಿಸದೆ, ಕೇವಲ ತಮ್ಮ ಸ್ವಹಿತಕ್ಕಾಗಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರದ ಅನೇಕ ಯೋಜನೆಗಳಿದ್ದರು ಸಮರ್ಪಕವಾಗಿ ಬಳಕೆಯಾಗದೇ ತಮ್ಮ ಸ್ವಹಿತಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಇದೇ ತಿಂಗಳ 8ರಂದು ನಿಂಬರ್ಗಾ ಗ್ರಾಮ ಪಂಚಾಯತಿ ಆವರಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು
ನಿಂಬರ್ಗಾ ಗ್ರಾಮ ಪಂಚಾಯತಿಯಲ್ಲಿರುವ ಭ್ರಷ್ಟರನ್ನು ತೊಲಗಿಸಿ ನಿಂಬರ್ಗಾ ಗ್ರಾಮ ಪಂಚಾಯತಿ ಉಳಿಸಿ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಹಾಗೂ ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹ
ನಿಂಬರ್ಗಾ ಗ್ರಾಮ ಪಂಚಾಯತಿಯಲ್ಲಿರುವ ಭ್ರಷ್ಟರನ್ನು ತೊಲಗಿಸಿ ನಿಂಬರ್ಗಾ ಗ್ರಾಮ ಪಂಚಾಯತಿ ಉಳಿಸಿ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಹಾಗೂ ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹಿಸಿ ಆಗಸ್ಟ್ 8 ರಂದು ಬೃಹತ್ ಪ್ರತಿಭಟನೆ ನಡೆಸಲಾಗಿತ್ತಿದೆ ಎಂದು ವಿಠ್ಠಲ್ ಸಿ ಕೋಣೇಕರ್ ತಿಳಿಸಿದ್ದಾರೆ.
RELATED ARTICLES
Recent Comments
ಮೇಲೆ Hello world!





