Home Uncategorized ದಿಕ್ಕಿಲ್ಲಿದ ಹಾಸ್ಪತ್ರೆ,ವೈದ್ಯರು ಸಿಬ್ಬಂದಿಗಳು ಇಲ್ಲದೆ ಪರದಾಡಿದ ರೋಗಿಗಳು,

ದಿಕ್ಕಿಲ್ಲಿದ ಹಾಸ್ಪತ್ರೆ,ವೈದ್ಯರು ಸಿಬ್ಬಂದಿಗಳು ಇಲ್ಲದೆ ಪರದಾಡಿದ ರೋಗಿಗಳು,

0

ಚಿಂಚೋಳಿ ತಾಲೂಕಿನ ಮಿರಿಯಾಣ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ವೈದ್ಯರು ಸಿಬ್ಬಂದಿಗಲ್ಲಿದೆ ಖಾಲಿ ಇರುವ ಸರಕಾರಿ ಆಸ್ಪತ್ರೆ, ಸಿಬ್ಬಂದಿಗಳು ಬರುವುದು ಹಾಜರಿ ಹಾಕುವುದು ಹೋಗುವುದು ಇವರ ದಿನನಿತ್ಯದ ಕೆಲಸವಾಗಿದೆ.

ಇವರುಗಳ ದಿನನಿತ್ಯ ಕಾರ್ಯಕ್ಕೆ ಇದು ಪ್ರಾಥಮಿಕ ಅರೋಗ್ಯ ಕೇಂದ್ರವೆ ಇಂದು ಖಾಲಿ ಖಾಲಿ ಆಗಿ ಕಾಣ್ತಾ ಇದೆ

ಅಧಿಕಾರಿಗಳಿಗೆ ಇದರ ಬೇಗ್ಗೆ ತಿಳಿಸಿದರೆ ಸಿಬಂದಿಗಳ ಖಾಸಗಿ ಕಾರ್ಯಕ್ರಮಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ

ಕಣ್ಣಿನ ತಪಾಸಣೆಯಲ್ಲಿ ಸರಕಾರ ಜನಗಳಿಗೆ ಉಚಿತವಾಗಿ ನೀಡುತ್ತಿರುವ ಕನ್ನಡಕ ಗಳು ತಿಂಗಳುಗಳು ಕಳೆದರು ಆಸ್ಪತ್ರೆಯ ಕಸದ ಮೂಲೆಯಲ್ಲಿ ಹಾಕಲಾಗಿದೆ.

ತಾಲ್ಲೂಕಿನ ಗರ್ಭಿಣಿಯರು ಸಹ ಈ ಆಸ್ಪತ್ರೆಗೆ ಬರುತ್ತಿದ್ದಾರೆ, ಸುತ್ತಮುತ್ತಲಿನ 10 ಕ್ಕೂ ಹೆಚ್ಚಿನ ಗ್ರಾಮಗಳ ಜನರು ಆಸ್ಪತ್ರೆಗೆ ಬಂದು ಹೋಗುತ್ತಿದ್ದಾರೆ ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಇಲ್ಲದೆ ಖಾಲಿ ಕುರ್ಚಿಗಳನ್ನು ಕಂಡು ಮನೆಯತ್ತ ಸಾಗುತ್ತಿದ್ದಾರೆ, ಕೆಲವರು ಖಾಸಗಿ ಆಸ್ಪತ್ರೆಗಳತ್ತ ಹೋಗುತ್ತಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರ ಮಿರಿಯಾಣದಲ್ಲಿ ಸರಿಯಾದ ಮೂಲ ಸೌಕರ್ಯಗಳಿಲ್ಲ. ಖಾಲಿ ಇರುವ ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿದ್ದು ಇದ್ದಂತಹ ಸಿಬಂದಿಗಳು ಬರುವುದು ಹಾಜರಿ ಹಾಕುವುದು ಹೋಗುವುದು ಆಗಿದೆ

ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಇದ್ದು, ಹಲವು ಸೌಕರ್ಯಗಳಿಂದ ವಂಚಿತವಾಗಿದೆ. ಇದರಿಂದಾಗಿ ಜನರಿಗೆ ಗುಣಮಟ್ಟದ ಚಿಕಿತ್ಸೆ ಮರೀಚಿಕೆಯಾಗಿದೆ.

ಈ ಭಾಗದಲ್ಲಿ ಕೆಲ ದಿನಗಳಿಂದ ಮಲೇರಿಯಾ,ಡೆಂಗಿ, ಚಿಕುನ್ ಗುನ್ಯಾದಂತಹ ಹಲವು ಪ್ರಕರಣಗಳು ಹೆಚ್ಚಾಗಿವೆ. ಚಿಕಿತ್ಸೆ ಪಡೆಯಲು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ಜನರ ಸಂಖ್ಯೆಯೂ ಹೆಚ್ಚಾಗಿದೆ. ಸಿಬಂದಿಗಳ ಕೊರತೆ ಹಾಗೂ ಸಿಬಂದಿಗಳ ಗೈರುಹಾಜರಿಗಳು ಜನರ ಜೀವಕ್ಕೆ ಮುಳುವಾಗಿದೆ

LEAVE A REPLY

Please enter your comment!
Please enter your name here

error: Content is protected !!