Home Uncategorized ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡ ವಿದ್ಯಾರ್ಥಿಗಳ ಆರೋಗ್ಯ ವಿಚಾರಣೆ

ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡ ವಿದ್ಯಾರ್ಥಿಗಳ ಆರೋಗ್ಯ ವಿಚಾರಣೆ

0
ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡ ವಿದ್ಯಾರ್ಥಿಗಳ ಆರೋಗ್ಯ ವಿಚಾರಣೆ

ಚಿತ್ತಾಪುರ ತಾಲೂಕಿನ ವಾಡಿ(ಜಂ) ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಿಜೆಪಿ ಮುಖಂಡರು ಭೇಟಿ ನೀಡಿ ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿರುವ ಆರು ಜನ ವಿದ್ಯಾರ್ಥಿಗಳ  ಆರೋಗ್ಯ ವಿಚಾರಿಸಿದರು.

ಚಿತ್ತಾಪುರ ತಾಲೂಕಿನ ಕನಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ದಂದು ಮಧ್ಯಾಹ್ನ ಬಿಸಿಯೂಟ  ಸೇವಿಸಿ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದರು.

ಗಂಭೀರ ಸಮಸ್ಯೆಯನ್ನು ಅನುಭವಿಸುತ್ತಿರುವ ಆರು ವಿದ್ಯಾರ್ಥಿಗಳನ್ನು ವಾಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿತ್ತು.

ಸಮುದಾಯ ಕೇಂದ್ರದ ಮುಖ್ಯ ವೈದ್ಯರಾದ ಡಾ ಮಹಮ್ಮದ್ ನುಮಾನ್ ಅವರೊಂದಿಗೆ ವಿದ್ಯಾರ್ಥಿಗಳು ಗುಣಮುಖ ಹೊಂದಿರುವ ಬಗ್ಗೆ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ,ಯುವ ಮುಖಂಡ ವಿಠಲ ನಾಯಕ ಅವರು ಮಾಹಿತಿ ಪಡೆದರು.

ಈ ಸಂಧರ್ಭದಲ್ಲಿ ಎಸ್ ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್,ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ ಮುಖಂಡರಾದ ರವಿ ಕಾರಬಾರಿ, ಶಿವಶಂಕರ ಕಾಶೆಟ್ಟಿ,ರವಿ ಜಾಧವ,ಲಕ್ಷ್ಮಣ ‌ಮೆಂಗಜಿ ಸೇರಿದಂತೆ ಇತರರು ಇದ್ದರು

LEAVE A REPLY

Please enter your comment!
Please enter your name here

error: Content is protected !!