Google search engine
ಮನೆUncategorizedವಚನ ಸಾಹಿತ್ಯಕ್ಕೆ ಬೆಳಕು ಕೊಟ್ಟ ಮಹಾ ಚೇತನ್ ಹಳಕಟ್ಟಿ

ವಚನ ಸಾಹಿತ್ಯಕ್ಕೆ ಬೆಳಕು ಕೊಟ್ಟ ಮಹಾ ಚೇತನ್ ಹಳಕಟ್ಟಿ

ವಚನ ಸಾಹಿತ್ಯಕ್ಕೆ ಬೆಳಕು ಕೊಟ್ಟ ಮಹಾ ಚೇತನ್ ಹಳಕಟ್ಟಿಯವರು

ಕಲಬುರಗಿ,ಜು.2.(ಕ.ವಾ) 12ನೇ ಶತಮಾನದ ಶರಣರ ವಚನಗಳನ್ನು ನಾವಿಂದು ನೋಡುತ್ತೇವೆ ಓದುತ್ತೀವೆ ಎಂದರೆ ವಚನ ಸಾಹಿತ್ಯವನ್ನು ಸಂಶೋಧನೆ ಮಾಡಿ ಅದಕ್ಕೆ ಒಂದು ರೂಪ ಕೊಟ್ಟು. ಬೆಳಕಿಗೆ ತಂದ ವಚನ ಪಿತಾಮಹ ಫಗು ಹಳಕಟ್ಟಿವರ ಶ್ರಮ ನಾವು ಮರೆವುವಂತಿಲ್ಲ ಎಂದು ಮುಖ್ಯಮಂತ್ರಿಗಳ ಸಲಹೆಗಾರರು ಹಾಗೂ  ಆಳಂದ ವಿಧಾನಸಭೆ ಶಾಸಕ ಬಿ.ಆರ್.ಪಾಟೀಲ್ ಅವರು ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಮಹಾನಗರ ಪಾಲಿಕೆ ಹಾಗೂ  ಜಿಲ್ಲಾಪಂಚಾಯತ್, ಕಲಬುರಗಿ ಇವರುಗಳ  ಸಂಯುಕ್ತಾಶ್ರಯದಲ್ಲ್ಲಿ ಡಾ.ಫ.ಗು. ಹಳಕಟ್ಟಿಯವರ 145 ನೇ ಜನ್ಮದಿನ “ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ” ಯ ಮಂಗಳವಾರದಂದು ಇಲ್ಲಿನ ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ಭಾವಚಿತ್ರಕ್ಕೆ ಪೂಜೆ ಪುಷ್ರ್ಪಾಚನೆ ಹಾಗೂ ಜೋತಿ ಬೆಳಗಿಸುವುದರ ಮೂಲಕ  ಚಾಲನೆ ನೀಡಿ ಮಾತನಾಡಿದರು

ಡಾ.ಫ.ಗು. ಹಳಕಟ್ಟಿ ಸರಳ ಜೀವನ ಉದಾತ್ತ ಚಿಂತನದ ಬದುಕಿಗೆ ದೃಷ್ಟಾಂತವಾಗಿ ನಾಡು-ನಡಿಗೆ ಮಹತ್ವದ  ಸೇವೆಗೈದ ಮಹಾನುಭಾವಿ ಡಾ. ಫಕೀರಪ್ಪ ಗುರುಬಸಪ್ಪಾ ಹಳಕಟ್ಟಿ ನಾಡು ಸದಾ ನೆನೆಸಬೇಕಾದ ಮಹಾ ಕನ್ನಡಿಗ, ಕಲ್ಯಾಣದಲ್ಲಿ ಕ್ರಾಂತಿಯಾದಾಗ ಅದೆಷ್ಟೋ ವಚನಗಳ ತಾಡೋಲೆಗಳು ಬೆಂಕಿಗೆ ಸುಟ್ಟು. ಹೊದವು ಅಳಿದುಳಿದ ವಚನದ ತಾಡೋಲೆಗಳನ್ನು ರಕ್ಷಿಸಿದರು ಹರಿದ ಸುಟ್ಟು. ಹೋದ ವಚನದ ತಾಡೋಲೆಗಳನ್ನು ಸಂಗ್ರಹಿಸಿ ಸಂಶೋಧನೆ ಮಾಡಿ ವಚನ ಸಾಹಿತ್ಯ ಬೆಳಕಿಗೆ ತಂದರು ನಂತರ ವಚನ ಸಾಹಿತ್ಯವನ್ನು  ಈಗಿನ ಯುವ ಪೀಳಿಗೆಯವರಿಗೆ  ಮುಖ್ಯವಾಗಿ ಅವರ ಬಗ್ಗೆ ಸೆಮಿನಾರ, ಡಿಬೇಟ್, ಚರ್ಚೆ ಸಂವಾದ ಮಾಡಿಸಬೇಕು ಜಾತಿಗಳ ಧರ್ಮಗಳ  ಮೇಲೆ ಜನರು ಮೊರೆಹೊಗುತ್ತಿದ್ದಾರೆ ಎಂದು  ಅಸಮಾಧನ ವ್ಯಕ್ತಪಡಿಸಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!