ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಹತ್ಯೆ ಮಾಡಿರುವ ಘಟನೆ ವಿಜಯಪುರ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆದಿದೆ.
ಎಪಿಎಂಸಿ ಮೇಕೆ ಹಾಗೂ ಕುರಿ ಮಾರುಕಟ್ಟೆಯ ಬಳಿ ರೋಹಿತ್ ಸುಭಾಶ್ ಪವಾರ ಕೊಲೆಯಾದ ಯುವಕ. ವಿಜಯಪುರ ನಗರದ ಕಂವಾರ ಓಣಿ ನಿವಾಸಿ ರೋಹಿತ್‌ನನ್ನು ಕೊಲೆಗೈದು ಮುಳ್ಳುಕಂಟಿಯಲ್ಲಿ ಶವ ಬಿಸಾಡಲಾಗಿದೆ. ಸ್ಥಳದಲ್ಲಿ ಬಿಯರ್ ಬಾಟಲ್ ಚಿಪ್ಸ್ ಪ್ಯಾಕೇಟ್ ಪತ್ತೆಯಾಗಿವೆ. ಕುಡಿದ ಮತ್ತಿನಲ್ಲಿ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಪರಿಚಯಸ್ಥರೇ ಕೊಲೆ ಮಾಡಿರೋ ಶಂಕೆಯೂ ಉಂಟಾಗಿದೆ.





