ಜಲಪಾತಗಳಲ್ಲಿ ಏಕಾಏಕಿ ಪ್ರವಾಹ ಹೆಚ್ಚಾದ ಕಾರಣ ಜನರು ಪ್ರಾಣ ಭಯದಿಂದ ಓಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಪ್ರವಾಸಿಗರು ಕುರ್ತಾಲಂ ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದರು. ಈ ವೇಳೆ ನೀರಿನ ಹರಿವು ಹೆಚ್ಚಾಗಿದೆ. ಇದರಿಂದ 16 ವರ್ಷದ ಅಶ್ವಿನ್ ಎಂಬ ಬಾಲಕ ಹೊಳೆಯಲ್ಲಿ ಕೊಚ್ಚಿ ಹೋಗಿದ್ದಾನೆ. ಬಾಲಕನನ್ನು ತಿರುನಲ್ವೇಲಿ ಮೂಲದವನೆಂದು ಗುರುತಿಸಲಾಗಿದೆ.ಈ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ದಿಢೀರ್ ಪ್ರವಾಹ ಉಂಟಾದಂತಿದೆ





