ಕ್ಯಾಂಟರ್ ಅಡ್ಡಗಟ್ಟಿ ದರೋಡೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಕ್ಯಾಂಟರ್ ನಲ್ಲಿದ್ದ 32 ಲಕ್ಷ ನಗದು ದರೋಡೆ ಮಾಡಿ ಪರಾರಿಯಾಗಿದ್ದಾರೆ.
ವಿಜಯಪುರ ಜಿಲ್ಲೆಯ ಕೊಲ್ಲಾರ ಪಟ್ಟಣದ ಹೊರ ಭಾಗದಲ್ಲಿ ನಿನ್ನೆ ತಡರಾತ್ರಿ ನಡೆದ ಘಟನೆ ನಡೆದಿದ್ದು ಇಂದು ಬೆಳಿಗ್ಗೆ ಬಳಕಿಗೆ ಬಂದಿದೆ. ಹತ್ತಿ ಮಾರಾಟ ಮಾಡಿ ವಾಪಸ್ ಹಣ ತೆಗೆದುಕೊಂಡು ಹೋಗುತ್ತಿದ್ದ ವೇಳೆ ದರೋಡೆ ನಡೆಸಲಾಗಿದೆ. ಕೊಲ್ಲಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





