ಮೇ 31 ರಂದು ತಂಬಾಕು ಮುಕ್ತ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಅಂದು ಎಲ್ಲ ದಿನ ಎಲ್ಲೆಡೆ ನಮ್ಮ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡುತ್ತಾರೆ. ತಂಬಾಕು ತಿನ್ನುವರಿಗೆ ತಂಬಾಕಿನಿಂದಾಗುವ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸಲಾಗುವದು.
ಕಳೆದ ಬಾರಿ ರೇಡ್ ಮಾಡಿದಾಗ 1ಲಕ್ಷ 11 ಸಾವಿರ ಕಲೆಕ್ಷನ್ ಆಗಿದೆ. ಈ ಬಾರಿ 5 ಲಕ್ಷದ ವರೆಗೂ ಕಲೆಕ್ಷನ್ ಮಾಡುವ ಗುರಿ ಹೊಂದಲಾಗಿದ್ದು, ಜನರು ತಂಬಾಕು ತಿನ್ನದೇ ಇರುವ ಹಾಗೆ ಮಾಡುವದೇ ನಮ್ಮ ಗುರಿಯಾಗಿದೆ ಎಂದು ಡಿ ಎಚ್ ಒ ಬಸವರಾಜ್ ಹುಬ್ಬಳ್ಳಿ ಹೇಳಿದರು.





