Google search engine
ಮನೆUncategorizedಬಾಬಾಸಾಹೇಬರನ್ನು ಎರಡು ಬಾರಿ ಸೋಲಿಸಿದ್ದು ಕಾಂಗ್ರೆಸನವರು ಸಂಸದ ಈರಣ್ಣ ಕಡಾಡಿ

ಬಾಬಾಸಾಹೇಬರನ್ನು ಎರಡು ಬಾರಿ ಸೋಲಿಸಿದ್ದು ಕಾಂಗ್ರೆಸನವರು ಸಂಸದ ಈರಣ್ಣ ಕಡಾಡಿ

ಬಾಬಾಸಾಹೇಬರನ್ನು ಎರಡು ಬಾರಿ ಸೋಲಿಸಿದ್ದು ಕಾಂಗ್ರೆಸನವರು ಸಂಸದ ಈರಣ್ಣ ಕಡಾಡಿ

ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಬುಸಗುಂಡೆ ತೋಟದಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ಹಮ್ಮಿಕೊಂಡಿದ್ದ ಚುನಾವಣೆ ಪ್ರಚಾರವಾಗಿ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ರಾಜ್ಯದಲ್ಲಿ ಮೊದಲನೇಯ ಹಂತದ ಬೆಂಗಳೂರಿನಲ್ಲಿ 50 ಪ್ರತಿಶತ ಮತದಾನ ಆಗಿದ್ದು ಆದರೆ ಇಲ್ಲಿ ಚುನಾವಣೆ ಒಂದು ಹಬ್ಬ ಇದ್ದಹಾಗೆ ಚುನಾವಣೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ಎಲ್ಲರು ಕಡ್ಡಾಯವಾಗಿ ಮತದಾನ ಮಾಡುವಂತೆ ತಿಳಿಸಿದರು.

ಕಾಂಗ್ರೆಸನವರು ಬಿಜೆಪಿ ಮುಸ್ಲಿಮರ ವಿರೋಧ ಇದೆ ಎನ್ನುವ ಭಾವನೆ ತುಂಬುತ್ತಿದ್ದಾರೆ ಆದರೆ ಕಳೆದ ಹತ್ತು ವರ್ಷದಲ್ಲಿ ಪ್ರಧಾನ ನರೇಂದ್ರ ಮೋದಿ ಉಜ್ವಲಾ, ಕಿಸಾನ್ ಸಮ್ಮಾನ, ಆಯೂಷಮಾನ ಭಾರತದಂತಹ ಹತ್ತು ಹಲವು ಯೋಜನೆಗಳನ್ನು ಯಾವುದೇ ಜಾತಿ ಧರ್ಮ ನೋಡದೆ ನೀಡುವ ಮೂಲಕ ಉನ್ನತ ಮಟ್ಟದ ಆಡಳಿತ ನೀಡಿ ಸಬಕಾ ಸಾಥ್ ಸಬಕಾ ವಿಕಾಸ ಸಬಕಾ ವಿಶ್ವಾಸ ಧ್ಯೇಯದಂತೆ ಜಗತ್ತಿನಲ್ಲಿ ಮಿಂಚುವಂತೆ ಮಾಡಿದೆ

ಕಾಂಗ್ರೆಸನವರು ಡಾ. ಬಿಆರ್ ಅಂಬೇಡ್ಕರ್ ಅವರನ್ನು ಎರಡು ಬಾರಿ ಸೋಲಿಸಿದೆ ಆದರೆ ಅವರು ಎದೆಗೊಂದದೆ ತಮ್ಮ ಛಲ ಬಿಡಲಿಲ್ಲ, ದೇಶಕ್ಕೆ ಸಂವಿಧಾನ ನೀಡಿದ ಅವರಿಗೆ ಇದ್ದಾಗ ಭಾರತ ರತ್ನ ನೀಡಲಿಲ್ಲ ದಫನ ಮಾಡಲು ಜಾಗ ನೀಡಲಿಲ್ಲ ಆದರೆ ನಾವು ಅವರ ಹುಟ್ಟಿದ, ದೇಹತ್ಯಾಗ ಮಾಡಿದ, ಚಿತೆ ನೀಡಿದ, ಅಧ್ಯಯನ ಮಾಡಿದ ಬೌದ್ಧ ಧರ್ಮ ಸ್ವೀಕರಿಸಿದ ಐದು ಪ್ರದೇಶಗಳ ಅಭಿವೃದ್ಧಿ ಮಾಡುವ ಮೂಲಕ ಅಂಬೇಡ್ಕರ ಹೆಸರಿಗೆ ಗೌರವ ತಂದಿದ್ದು ನಮ್ಮ ಸರ್ಕಾರ

ಅದಕ್ಕಾಗಿ ನೀವು ಪ್ರಬುದ್ಧ ಮತದಾರರು ಯಾವುದು ಸರಿ ಯಾವುದು ತಪ್ಪು ಎಂದು ಅಧ್ಯಯನ ಮಾಡಿ ಕಳೆದ 10 ವರ್ಷಗಳಲ್ಲಿ ನೀಡಿದ ಉನ್ನತ ಆಡಳಿತ ನೀಡಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೂಮ್ಮೆ ಪ್ರಧಾನಿ ಮಾಡಲು ಸಹಕಾರ, ಶಿಕ್ಷಣ, ಔದ್ಯೋಗಿಕ ರಂಗದಲ್ಲಿ ಅಭಿವೃದ್ಧಿ ಉದ್ಯೋಗ ನೀಡುವ ಮೂಲಕ ಜನಪರ ಆಡಳಿತ ನೀಡಿದ ಅಣ್ಣಾಸಾಹೇಬ ಜೊಲ್ಲೆಯವರ ಕಮಲ ಗುರುತಿಗೆ ಮತ ನೀಡುವಂತೆ ಕೇಳಿಕೊಂಡರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!