ತಾಲೂಕಿನ ರಾಂಪುರ ಸಮುದಾಯ ಆರೋಗ್ಯ ಕೇಂದ್ರ ಆವರಣದ ನೂತನವಾಗಿ ನೀಡಲಾದ 108 ಅಂಬುಲೆನ್ಸ್ ಗೆ ವೈದ್ಯಧಿಕಾರಿ ಡಾ, ಅಮೃತ ಚಾಲನೆ ನೀಡಿದರು.
ಆರೋಗ್ಯ ಸಮುದಾಯ ಕೇಂದ್ರ ವ್ಯಾಪ್ತಿಯಲ್ಲಿದ್ದ ಹಳೆಯ 108 ಆಂಬುಲೆನ್ಸ್ ಆಗಾಗ ರಿಪೇರಿಗೆ ಬರುತ್ತಿದ್ದು ಎಲ್ಲಂದರೆ ಕೆಟ್ಟು ನಿಂತು ಸಾರ್ವಜನಿಕ ವಲಯದಲ್ಲಿ ಹೆಚ್ಚು ಸಮಸ್ಯೆಯನ್ನು ತರುತ್ತಿತ್ತು. ಈ ಕಾರಣದಿಂದಾಗಿ ಇಲ್ಲಿನ ಸಮಸ್ಯೆಗಳನ್ನು ಮೇಲಾಧಿಕಾರಿಗಳು ಗಮನಕ್ಕೆ ತಂದ ಹಿನ್ನೆಲೆ ಹಳೆಯ ತುರ್ತು ವಾಹನ ಬದಲಿಗೆ ಹೊಸ ವಾಹನ ನೀಡಿದ್ದಾರೆ.





