1.ರಕ್ತದಲ್ಲಿನ ಸಕ್ಕರೆ ಅಂಶವನ್ನು ಹಿಡಿತಕ್ಕೆ ತರುವುದು. ಮೆಂತೆಯಲ್ಲಿ ಅನೇಕ ಪೋಷಕಾಂಶಗಳಿವೆ. ನಾರಿನಾಂಶ, ವಿಟಮಿನ್ ಸಿ, ಪೊಟ್ಯಾಶಿಯಂ ಮುಂತಾದ ಪೋಷಕಾಂಶಗಳ ಸಲುವಾಗಿ ಇದು ವೈದ್ಯಕೀಯ ಗುಣವನ್ನು ಹೊಂದಿದೆ. ಮೆಂತ್ಯ ಸೊಪ್ಪಿನಲ್ಲಿರುವ ಹೈ ಫೈಬರ್, ಎಂದರೆ ನಾರಿನಂಶ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಹಿಡಿತಕ್ಕೆ ತರುತ್ತದೆ. ಮಧುಮೇಹದಿಂದ ಬಳಲುತ್ತಿರುವವರು ದಿನನಿತ್ಯ ಮೆಂತ್ಯ ಸೊಪ್ಪಿನ ಸೇವನೆಯನ್ನು ಮಾಡುವುದು ಅತ್ಯುತ್ತಮ
2.ಮೆಂತೆಯು ಎದೆ ಹಾಲನ್ನು ಹೆಚ್ಚು ಮಾಡಲು ಸಹಾಯಕ
ಮೆಂತ್ಯೆ”. ಇದೊಂದು ನೈಸರ್ಗಿಕ ಎದೆಹಾಲು ಉತ್ಪತ್ತಿ ಮಾಡುವ ಔಷಧಿಯಂತೆ ವರ್ತಿಸುತ್ತದೆ. ಮೆಂತ್ಯದ ಸೊಪ್ಪು ಅಥವಾ ಮೆಂತ್ಯದ ಕಾಳಿನ ಸೇವನೆ ಎದೆ ಹಾಲು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಕೇವಲ ಎದೆ ಹಾಲನ್ನು ಹೆಚ್ಚಿಸುವುದು ಮಾತ್ರ ಅಲ್ಲದೆ ಗರ್ಭಿಣಿಯರಿಗೆ ಸುಲಭ ಹೆರಿಗೆಯಾಗಲು ಪ್ರೇರೇಪಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಹೆರಿಗೆಯ ಸಂದರ್ಭದಲ್ಲಿ ಗರ್ಭಿಣಿಯರು ಸಾವನ್ನಪ್ಪುವ ಸಂಖ್ಯೆ ಹೆಚ್ಚಾಗಿದೆ. ಹೆರಿಗೆ ಸಮಯದಲ್ಲಿ ಅದರಲ್ಲಿಯೂ ಸಾಮಾನ್ಯ ಹೆರಿಗೆಯ ಸಮಯದಲ್ಲಿ, ಯಾವುದೇ ಶಸ್ತ್ರ ಚಿಕಿತ್ಸೆ ಇಲ್ಲದೆ ಮಗುವಿಗೆ ಜನ್ಮ ನೀಡುವ ಸಂದರ್ಬದಲ್ಲಿ ತಾಯಂದಿರು ಅತಿಹೆಚ್ಚಿನ ನೋವಿಗೆ ಒಳಪಡುತ್ತಾರೆ. ಇಂತಹ ನೋವನ್ನು ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಲು ಮತ್ತು ಸುಲಭವಾಗಿ ಹೆರಿಗೆ ಆಗಲು ಮೆಂತ್ಯ ಸೊಪ್ಪಿನ ಸೇವನೆ ಸಹಾಯ ಮಾಡುತ್ತದೆ





