ಬಾಗಲಕೋಟೆ ಲೋಕಸಭಾ ಚುನಾವಣಾ ನೀತಿ ಸಂಹಿತೆ ಹಿನ್ನಲೆ ಅಬಕಾರಿ ಇಲಾಖೆಯಿಂದ ಕಾರ್ಯಾಚರಣೆ ಮಾಡಿದೆ. ಹೌದು, ಅಬಕಾರಿ ಅಧಿಕಾರಿಗಳು ಸುಮಾರು 52 ಸಾವಿರ ಮೌಲ್ಯದ ವಿವಿಧ ಬ್ರಾಂಡನ 103. 680 ಲೀಟರ್ ಮದ್ಯ ಜಪ್ತಿಮಾಡಿದ್ದಾರೆ.
ಜಮಖಂಡಿ ಮತಕ್ಷೇತ್ರ ವ್ಯಾಪ್ತಿಯ ಆರ್. ಟಿ. ಓ ಕಚೇರಿ ಹಿಂದಿನ ರಸ್ತೆಯಲ್ಲಿ ಕಾರ್ಯಾಚರಣೆವೇಳೆ ಜಪ್ತಿ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ವಿಠಲ ಶ್ರೀಕಾಂತ ಗುಗ್ಗರಿ ಆರೋಪಿ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.