ಬೆಂಗಳೂರು: ಪ್ರಹ್ಲಾದ್ ಜೋಷಿ ಸಾರ್ವಜನಿಕ ಚರ್ಚೆಗೆ ಬರಲಿ: ಡಿಕೆ ಸವಾಲ್
ಡಿಸಿಎಂ ಡಿಕೆಶಿ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರಿಗೆ ಮನರೇಗಾ ಹಾಗೂ ವಿಬಿಜಿರಾಮ್ಜಿ ಯೋಜನೆಗಳ ಬಗ್ಗೆ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ. ಯುಪಿಎ ಅವಧಿಯ ಮನರೇಗಾ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಜೋಷಿ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿ ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕರು ಅಥವಾ ಕೇಂದ್ರ ಸಚಿವರಲ್ಲಿ ಯಾರಾದರೂ ಒಬ್ಬರು ಮಾಧ್ಯಮ ವೇದಿಕೆಯಲ್ಲಿ ಚರ್ಚೆಗೆ ಬರಲಿ ಎಂದು ಡಿಕೆಶಿ ಸವಾಲು ಹಾಕಿದ್ದಾರೆ ಅವ್ಯವಹಾರ ಸಾಬೀತಾದರೆ ಸಿಬಿಐ ತನಿಖೆಗೆ ನೀಡಲು ತಾಕತ್ತಿದ್ದರೆ ಮಾಡಿಸಲಿ ಎಂದೂ ಅವರು ಹೇಳಿದ್ದಾರೆ





