Google search engine
ಮನೆUncategorizedಕಾವ್ಯ ಹೆಣ್ಣಿಗೆ ಸ್ವಾಯತ್ತ ಜಗತ್ತನ್ನು ರೂಪಿಸಿಕೊಳ್ಳುವ ಮಾರ್ಗ: ಡಾ.ಮುಮ್ತಾಜ್ ಬೇಗಂ

ಕಾವ್ಯ ಹೆಣ್ಣಿಗೆ ಸ್ವಾಯತ್ತ ಜಗತ್ತನ್ನು ರೂಪಿಸಿಕೊಳ್ಳುವ ಮಾರ್ಗ: ಡಾ.ಮುಮ್ತಾಜ್ ಬೇಗಂ

ಕಾವ್ಯ ಹೆಣ್ಣಿಗೆ ಸ್ವಾಯತ್ತ ಜಗತ್ತನ್ನು ರೂಪಿಸಿಕೊಳ್ಳುವ ಮಾರ್ಗ: ಡಾ.ಮುಮ್ತಾಜ್ ಬೇಗಂ ಗಂಗಾವತಿ,ಜ.4- ಕನ್ನಡ ಕಾವ್ಯ ಯಾವ ದಿಕ್ಕಿನೆಡೆಗೆ ಹೋಗುತ್ತಿದೆ, ಹೋಗಬೇಕು ಎಂಬುದನ್ನು ಕವಿ ಮತ್ತೆ ಮತ್ತೆ ಕೇಳಿಕೊಳ್ಳಬೇಕು ಕವಿ ಎಂಥ ಹುಡುಕಾಟದ ಪಾಲುದಾರ ಆಗಬೇಕು ಎಂಬ ಎಚ್ಚರಿಕೆಯ ಪ್ರಜ್ಞೆಯ ಜಾಗೃತಿ ಮುಖ್ಯವಾಗಿ ಬೇಕು ಎಂದರು ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆಯಾದ ಡಾ.ಮುಮ್ತಾಜ್ ಬೇಗಂ ಅವರು ಗಂಗಾವತಿಯಲ್ಲಿ ಅಯೋಜಿಸಲಾಗಿದ್ದ ಒದು ಹೊತ್ತಿಗೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಮನುಷ್ಯನ ಆಕ್ರಂಧನದ ಪರಿಣಾಮಗಳೇನು? ವಿಚಿತ್ರವಾದ ಹುಡುಕಾಟ, ನಿಗೂಢ, ಆಲಿಸುವಿಕೆ, ಕಾಯುವಿಕೆ, ಮಾಗುವ ಗುಣ ಏನನ್ನು ಸೂಚಿಸುತ್ತವೆ ಎನ್ನುವ ಅಂಶಗಳನ್ನು ಸೂಕ್ಷ್ಮವಾಗಿ ಗ್ರಹಿಸಬೇಕು. ಹೆಣ್ಣಿಗೆ ಕಾವ್ಯ ಒಂದು ಸ್ವಾಯತ್ತ ಜಗತ್ತನ್ನು ನಿರ್ಭಿಡೆಯಾಗಿ ಕಟ್ಟಿಕೊಳ್ಳಲು ಇರುವ ಮಾರ್ಗವಾಗಿದೆ. ಮಹಿಳೆಯರು ಬರೆಯುತ್ತಿರುವ ವರ್ತಮಾನದ ಕವಿತೆಗಳಲ್ಲಿ ಮುಕ್ತತೆ ಹೆಚ್ಚು ಕಾಣುತ್ತೇವೆ. ನಿವೇದನಾತ್ಮಕ ನಿರೂಪಣಾ ವಿಧಾನವನ್ನು ದಾಟಿ ಹೆಣ್ಣಿನ ಒಳಲೋಕದ ಆವರಣವನ್ನು ತಲುಪುತ್ತಿರುವ ಕವಿತೆಗಳನ್ನು ಕಾಣುತ್ತೇವೆ ಎಂದರು. ರವಿವಾರ ನಗರದ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಸಹಯೋಗದಲ್ಲಿ ಕರ್ನಾಟಕ ಲೇಖಕಿಯರ ಸಂಘ. (ರಿ )ಕೊಪ್ಪಳ ಜಿಲ್ಲಾ ಶಾಖೆ ಕೊಪ್ಪಳ ಇವರ ಓದು ಹೊತ್ತಿಗೆ ಅಭಿಯಾನ ಕಾರ್ಯಕ್ರಮದಲ್ಲಿ ಜಯಶ್ರೀ ಹಕ್ಕಂಡಿಯವರ ಮಿಣುಕು ದೀಪಗಳು ಹಾಗೂ ಉಲಿದಷ್ಟೇ ದನಿ ಪುಸ್ತಕಗಳ ಕುರಿತು ಅವಲೋಕನ ಮಾಡಲಾಯಿತು. ಜಯಶ್ರೀ ಹಕ್ಕಂಡಿಯವರ ಎರಡು ಕೃತಿಗಳ ಕುರಿತು ನಾಗರತ್ನ ಎಚ್. ಮಾತನಾಡಿ ಉಲಿದಷ್ಟೇ ದನಿ ಹಾಗೂ ಮಿಣುಕು ದೀಪಗಳು ಕೃತಿಗಳು ಉತ್ತಮ ಸಂದೇಶವನ್ನು ನೀಡುತ್ತವೆ ಅಷ್ಟೇ ಅಲ್ಲದೆ ಜಂಜಡದ ಬದುಕಿನ ತಾಕಲಾಟಗಳು, ವಾತ್ಸಲ್ಯ, ಪ್ರೇಮದ ನೆಲೆಗಳು, ಗಾಂಧಿ ತತ್ವ ಚಿಂತನೆಗಳು ಇತ್ಯಾದಿ ಗಂಭೀರವಾಗಿ ಮೂಡಿ ಬಂದಿದೆ. ಸಾಹಿತ್ಯ ಸಮಾಜದ ಹಾಗೂ ಹೋಗುಗಳನ್ನು ಹೇಳುತ್ತಾ ಅದರಲ್ಲಿ ಉಂಟಾದ ಓರೆ ಕೋರೆಗಳನ್ನು ಖಂಡಿಸುತ್ತಾ ಮೌಲ್ಯಗಳ ಜೀವಂತಿಕೆಯನ್ನು ಇಲ್ಲಿ ಮುಖ್ಯವಾಗಿ ಬಿಂಬಿಸಲಾಗಿದೆ ಎಂದರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!