ಕೆಟ್ಟು ಹೋದ ಬಸ್ ಗಳನ್ನು ಸರಿಯಾಗಿ ವಿಲೇವಾರಿ ಮಾಡಬೇಕು.ಆದರೆ,ಅಲ್ಲಿ ನಿಯಮವನ್ನು ಗಾಳಿಗೆ ತೂರಿ..!ಯಾವುದೇ ಸುರಕ್ಷತಾ ನಿಯಮ ಪಾಲಿಸದೇ…! ಅಪಾಯಕಾರಿಯಾಗಿ ಬಿಡಿಭಾಗಗಳನ್ನು ವಿಲೇವಾರಿ ಮಾಡಲಾಗುತ್ತಿದೆ.ಸಿಲಿಂಡರ್ ಬ್ಲಾಸ್ಟ್ ಆದ್ರೆ ಕಾರ್ಮಿಕರ ಜೀವಕ್ಕೆ ಗಂಡಾಂತರವಿದೆ.ಹಾಗಾದ್ರೆ ಈ ಸ್ಟೋರಿ ನೋಡಿ GFX*ಯಾದಗಿರಿ ನಗರದ ಮುಂಡರಗಿ ರಸ್ತೆ ಮಾರ್ಗದಲ್ಲಿ ಕೆಟ್ಟು ಹೋದ ಬಿಡಿಭಾಗಗಳ ವಿಲೇವಾರಿಯಲ್ಲಿ ನಿಯಮ ಉಲ್ಲಂಘನೆ* ಅಪಾಯಕಾರಿ ಸಿಲಿಂಡರ್ ಗಳ ಬಳಕೆ*ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ಆಗ್ರಹ ತಪ್ಪಿತಸ್ಥ ಟೆಂಡರ್ ದಾರರ ವಿರುದ್ಧ ಕ್ರಮಕ್ಕೆ ಆಗ್ರಹ ವೈಓ1:ಸಾರಿಗೆ ನಿಗಮದ ಸರಕಾರದ ಕೆಟ್ಟು ಹೋದ ಬಸ್ ಗಳನ್ನು ವಿಲೇವಾರಿ ಮಾಡಲು ಟೆಂಡರ್ ಪಡೆದ ಟೆಂಡರ್ ದಾರರು ಟೆಂಡರ್ ನಿಯಮವನ್ನು ಗಾಳಿಗೆ ತೂರಿದ್ದಾರೆ.ಕಲ್ಯಾಣ ಕರ್ನಾಟಕದ ಸಾರಿಗೆ ನಿಗಮದ ಕೆಟ್ಟು ಹೋದ ಬಸ್ ಗಳನ್ನು ವಿಲೇವಾರಿ ಮಾಡಲು ಶಿವಮ್ಮ ಡಿಸ್ಪೊಜಲ್ ಸಂಸ್ಥೆಯು ಟೆಂಡರ್ ಪಡೆದಿದೆ.ನಿಯಮ ಬದ್ದವಾಗಿ ಸುರಕ್ಷಿತ ಹಾಗೂ ಕಾರ್ಮಿಕರ ಸುರಕ್ಷತಾ ಕ್ರಮ,ಪರಿಸರಕ್ಕೆ ತೊಂದರೆಯಾಗದಂತೆ ಕೆಟ್ಟು ಹೋದ ಬಸ್ ಗಳ ವಿಲೇವಾರಿ ಮಾಡಬೇಕು. ಆದರೆ, ಖಾಸಗಿ ಜಾಗದಲ್ಲಿ ನಿಯಮ ಉಲ್ಲಂಘನೆ ಮಾಡಿ ಯಾವುದೇ ಸುರಕ್ಷತಾ ಕ್ರಮವಹಿಸದೇ ಅಪಾಯಕಾರಿಯಾಗಿ ಸಿಲಿಂಡರ್ ಬಳಕೆ ಮಾಡಿ ಬಿಡಿಭಾಗಗಳ ವಿಲೇವಾರಿ ಮಾಡಲಾಗುತ್ತಿದೆ. ವೈಓ2:ಈ ಬಗ್ಗೆ ಈಗಾಗಲೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಟೆಂಡರ್ ಸಂಸ್ಥೆ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಸಿಲಿಂಡರ್ ಬಳಕೆ ಮಾಡಿ ಬಿಡಿಭಾಗಗಳ ಕಟ್ ಮಾಡುತ್ತಿದ್ದಾರೆ.ಮಾನವ ಜೀವಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಸಿಲಿಂಡರ್ ಬಳಕೆ ಮಾಡುತ್ತಿದ್ದಾರೆ. ಅದೆ ರೀತಿ ಬಸ್ ಬಿಡಿಭಾಗಗಳ ಪಾರ್ಟ್ ನ ಕೆಮಿಕಲ್ ಹಾಗೂ ಇನ್ನಿತರ ವಸ್ತುಗಳಿಂದ ಪರಿಸರಕ್ಕೆ ಧಕ್ಕೆಯಾಗುತ್ತಿದೆ.ವಿಲೇವಾರಿ ಮಾಡುವ ಸ್ಥಳದ ಸಮೀಪದಲ್ಲಿ ಯೇ ಖಾಸಗಿ ಕಾಲೇಜು ಇದೆ.ಹೀಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸ್ಥಳೀಯರು ಆಗ್ರಹ ಮಾಡಿದ್ದಾರೆ. ಬೈಟ್1:ಟಿ.ಎನ್.ಭೀಮುನಾಯಕ (ಸ್ಥಳೀಯ ) ವೈಓ3:ಮುಂದೆ ಎನಾದರು ಅನಾಹುತವಾದರೆ ಯಾರು ಹೊಣೆ.ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು.ನಿಯಮ ಬದ್ದವಾಗಿ ವಿಲೇವಾರಿ ಮಾಡುವಂತೆ ಸ್ಥಳೀಯರು ಆಗ್ರಹ ಮಾಡಿದ್ದಾರೆ. ಮಲ್ಲಣ್ಣಗೌಡ ಕಾಮರೆಡ್ಡಿ (ಎಸ್ಎಸ್ ವಿ ಟಿವಿ ಯಾದಗಿರಿ)





