ಬೆಳೆ ಪರಿಹಾರದಲ್ಲಿ ತಾರತಮ್ಯ ಖಂಡಿಸಿ ನಾಳೆ 23 ರಂದು ಸೇಡಂನಲ್ಲಿ ಬೃಹತ್ ಪ್ರತಿಭಟನೆ ಜರುಗಲಿದೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಹೇಳಿದರು ಸೆಡಂ ಅವೈಜ್ಞಾನಿಕ ಬೆಳೆ ಸಮೀಕ್ಷೆ ಮಾಡಿ ರೈತರಿಗೆ ಬೆಳೆ ಪರಿಹಾರದಲ್ಲಿ ವಿತರಣೆಯಲ್ಲಿ ನಡೆದಿರುವ ತಾರತಮ್ಯ ಖಂಡಿಸಿ ನಾಳೆ 23 ರಂದು ಸೇಡಂ ಮಿನಿ ವಿಧಾನ ಸೌದದ ಆವರಣದಲ್ಲಿ ಬೃಹತ್ ಪ್ರತಿಭಟನೆ ಮಾಡಿ ಒಂದು ದಿನದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಹೇಳಿದರು. ಸುದ್ದಿ ಮಾದ್ಯಮದವರೊಂದಿಗೆ ಮಾತನಾಡಿ ತಾಲೂಕಿನಲ್ಲಿ 46,000 ಹೆಕ್ಟರ್ ಪ್ರದೇಶದಲ್ಲಿ ಬೆಳೆ ಸಂಪೂರ್ಣ ನಾಶವಾಗಿದ್ದರೂ ಅಧಿಕಾರಿಗಳು ಕೇವಲ 30,000 ಹೆಕ್ಟರ್ ಮಾತ್ರ ಹಾನಿಯಾಗಿದೆ ಎಂದು ತಪ್ಪು ವರದಿ ಸಲ್ಲಿಸಿದ್ದಾರೆ ಆ ವರದಿಯಂತೆ ಕೂಡ ಸಂಪೂರ್ಣ ಪರಿಹಾರ ವಿತರಣೆ ಆಗಿಲ್ಲ ಕೆಲ ರೈತರಿಗೆ 5,000 ರೂಪಾಯಿ ಇನ್ನೂ ಕೆಲವರಿಗೆ 3,000 ರೂಪಾಯಿ, ಹಾಕಿ ಸರಕಾರ ರೈತರನ್ನು ಅವಮಾನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು . ಇನ್ನೂ ಸುಮಾರು 16,000 ಸಾವಿರ ರೈತರು ಬೆಳೆ ಸಮೀಕ್ಷೆ ಯಿಂದ ಹೊರಗುಳಿದಿದ್ದಾರೆ. ಈ ಕುರಿತು ಅಧಿಕಾರಿಗಳು ತಕ್ಣಣ ಸಭೆ ನಡೆಸಿ ಸಂಪೂರ್ಣ ಬೆಳೆ ವಿಮೆ ಪಾವತಿಸಬೇಕೆಂದು ಒತ್ತಾಯಿಸಿದ್ದಾರೆ ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾ ಅದ್ಯಕ್ಷ ಶರಣು ಮೆಡಿಕಲ್, ನಗರಾದ್ಯಕ್ಷ ಸತೀಷ ಪಾಟೀಲ ತರನಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಪ್ಪ ಕೊಳ್ಳಿ, ರೈತ ಮೋರ್ಚಾ ಅದ್ಯಕ್ಷ ನಾಗರೆಡ್ಡಿ ಪಾಟೀಲ, ಪ್ರಮುಖರಾದ ವಿಜಯಕುಮಾರ ಆಡಕಿ,ಓಂಪ್ರಕಾಶ ಪಾಟೀಲ, ರಾಘವೇಂದ್ರ ಮೆಕಾನಿಕ್, ವಿರೇಶ ಹೂಗಾರ,ಇದ್ದರು. ಶರಣಪ್ಪ ಎಳ್ಳಿ ssvtv news ಸೇಡಂ





