ಪೀಪಲ್ ಫಾರ್ ದಿ ಎಥಿಕಲ್ ಟ್ರೇಟೆಂಟ್ ಆಫ್ ಅನಿಮಲ್ಸ್ (ಪಿಇಟಿಎ) ಇಂಡಿಯಾ, ಜೀವಂತ ಆನೆಯಂತೆಯೇ ಕಾಣುವ 10 ಅಡಿ ಎತ್ತರದ ರೋಬೋಟಿಕ್ ಆನೆಯನ್ನು ನಂಜನಗೂಡಿನ ಸುತ್ತೂರು ಮಠಕ್ಕೆ ಉಡುಗೊರೆಯಾಗಿ ನೀಡಿದೆ.
ಈ ರೋಬೋ ಆನೆಯನ್ನು ಕೇರಳದ ಕಲಾವಿದ ಪ್ರಶಾಂತ್ ಎನ್ನುವವರು ತಯಾರಿಸಿದ್ದಾರೆ. ಆನೆಗಳನ್ನು ಸಂರಕ್ಷಿಸಬೇಕು ಮತ್ತು ಹಿಂಸೆಯಿಂದ ಮುಕ್ತ ಮಾಡಬೇಕು ಎಂಬ ಉದ್ದೇಶದಿಂದ ಕೃತಕ ಆನೆಯನ್ನು ದೇವಸ್ಥಾನದ ಉತ್ಸವಗಳಲ್ಲಿ ಬಳಸಲು ಇದನ್ನು ನಿರ್ಮಿಸಲಾಗಿದೆ.