ಕೆಬಿಎನ ಆಸ್ಪತ್ರೆ: ವಿಶ್ವ ಏಡ್ಸ್ ದಿನ ಅಂಗವಾಗಿ ವಿಶೇಷ ಉಪನ್ಯಾಸ ಕಲಬುರ್ಗಿ: ವಿಶ್ವ ಏಡ್ಸ್ ದಿನದ ಪ್ರಯುಕ್ತ ಕೆಬಿಎನ ಟೀಚಿಂಗ್ ಮತ್ತು ಜೆನೆರಲ್ ಆಸ್ಪತ್ರೆಯ ಚರ್ಮರೋಗ ಶಾಸ್ತ್ರ ವಿಭಾಗ ಶುಕ್ರವಾರ ವಿಶೇಷ ಉಪನ್ಯಾಸವನ್ನು ಹಮ್ಮಿಕೊಂಡಿತ್ತು. ಎಮ್ ಆರ್ ಎಮ್ ಸಿ ಕಾಲೇಜಿನ ಮಾಜಿ ಪ್ರಾಧ್ಯಾಪಕ ಡಾ ಮುರುಗೇಶ ಪಾಸ್ತಾಪುರ ಇವರು ಎಚ್ ಐ ವಿ ಸೊಂಕಿನ ಇತಿಹಾಸ, ವೈರಸನ ರಚನೆ, ಜೀವನ ಚಕ್ರ, ಹರಡುವ ವಿಧಗಳ ಬಗ್ಗೆ ಮಾಹಿತಿ ನೀಡಿದರು. ಸೋಂಕನ್ನು ಪತ್ತೆ ಮಾಡಲು ಆರ್ ಟಿ ಪಿಸಿ ಆ ರ್, p24 ಅಂಟಿಜೆನ, ಅಂಟಿಬೊಡಿ ಟೆಸ್ಟ್ ಗಳನ್ನು ಮಾಡಿಸಲಾಗುತ್ತದೆ ರೋಗಿಗೆ ಯಾವ ಟೆಸ್ಟ, ಯಾವಾಗ, ಟೆಸ್ಟ್ ಪುನರವರ್ತಿ, ದರದ ಪರಿಣಾಮ, ಯಾವಾಗ ರೋಗದ ಬಗ್ಗೆ ಹೇಳುವುದು ಇವೆಲ್ಲ ವೈದ್ಯರ ಮುಂದಿರುವ ಸವಾಲುಗಳು ಎಚ್ ಐ ವಿ ಸೋಂಕು 86.7% ಅಸುರಕ್ಷಕ ಲೈಂಗಿಕತೆಯಾಗಿದೆ. ಇತ್ತೀಚಿನ ದಿನಮನಗಳಲ್ಲಿ ಸೋಂಕು ಪ್ರಮಾಣ ಕಡಿಮೆಯಾಗಿದೆ. ಭಾರತವನ್ನು ಸಂಪೂರ್ಣ ಏಡ್ಸ್ ಮುಕ್ತ ಮಾಡ್ಬೇಕಾಗಿದೆ ಎಂದರು. ಹೆಪಾಟಿಟಿಸ ಬಿಯ ವ್ಯಾಕ್ಸಿನೇಷನ ತೆಗೆದು ಕೊಳ್ಳುವುದು ಅತಿ ಅವಶ್ಯ. ಅದಕ್ಕೆ ಚಿಕೆತ್ಸೆ ಇಲ್ಲ. ಎಲ್ಲರೂ ಹೆಪಾಟಿಟಿಸ ಬಿ ತೆಗೆದುಕೊಂಡು ಆರೋಗ್ಯಯುಕ್ತ ಜೀವನ ನಡೆಸಬೇಕು ಎಂದು ಹೇಳಿದರು. ನಂತರ ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿದರು. ಈ ವಿಶೇಷ ಉಪನ್ಯಾಸದಲ್ಲಿ ಮೆಡಿಕಲ್ ಡೀನ ಡಾ ಗುರು ಪ್ರಸಾದ, ನಾಡೋಜ ಪಿ ಎಸ್ ಶಂಕರ, ಮೆಡಿಕಲ ಅದೀಕ್ಷಕ ಸಿದ್ಧಾಲಿಂಗ ಚೆಂಗಟಿ ಏಡ್ಸ್ ದಿನ ಕುರಿತು ಮಾತನಾಡಿದರು ಹಾಗೂ ಧರ್ಮಟಲಜಿ ವಿಭಾಗದ ಶ್ರಮ ವನ್ನು ಶ್ಲಾಘಸಿದರು ವಿಭಾಗದ ಪಿ ಜಿ ವಿದ್ಯಾರ್ಥಿ ಡಾ ದರ್ಶನ ರೆಡ್ಡಿ ಪ್ರಸ್ತಾವಕ ಮಾತನಾಡಿದರು, ಸಹಾಯಕ ಪ್ರಾಧ್ಯಾ ಪಕ ಡಾ ವಸೀಮ ವಂದಿಸಿದರೆ ಪಿ ಜಿ ವಿದ್ಯಾರ್ಥಿನಿ ಡಾ ಸಫೋರಾ ನಿರೂಪಿಸಿದರು ಈ ಉಪನ್ಯಾಸ ಕಾರ್ಯಕ್ರಮ ದಲ್ಲಿ ವಿಭಾಗದ ಎಲ್ಲ ವಿದ್ಯಾರ್ಥಿಗಳು ಹಾಜರಿದ್ದರು
ಕೆಬಿಎನ ಆಸ್ಪತ್ರೆ: ವಿಶ್ವ ಏಡ್ಸ್ ದಿನ ಅಂಗವಾಗಿ ವಿಶೇಷ ಉಪನ್ಯಾಸ
ಕೆಬಿಎನ ಆಸ್ಪತ್ರೆ: ವಿಶ್ವ ಏಡ್ಸ್ ದಿನ ಅಂಗವಾಗಿ ವಿಶೇಷ ಉಪನ್ಯಾಸ





