ಯಾದಗಿರಿ ರಾಜ್ಯದಲ್ಲಿ ಸಿಎಂ ಕುರ್ಚಿ ಕಿತ್ತಾಟ ವಿಚಾರ, ಸಿಎಂ ಕುರ್ಚಿ ಕಿತ್ತಾಟದ ಗೊಂದಲ ಶೀಘ್ರವಾಗಿ ಬಗೆ ಹರಿಸಬೇಕೆಂದ ರಾಜುಗೌಡ, ಯಾದಗಿರಿಯಲ್ಲಿ ಮಾಜಿ ಸಚಿವ ರಾಜುಗೌಡ ಹೇಳಿಕೆ, ಕಾಂಗ್ರೆಸ್ ಹೈಕಮಾಂಡ್ ಮಧ್ಯ ಪ್ರವೇಶ ಮಾಡಿ ಗೊಂದಲ ಬಗೆಹರಿಸಬೇಕು, ಒಂದು ತೀರ್ಮಾನಕ್ಕೆ ಬಂದರೆ ರಾಜ್ಯಕ್ಕೆ ಒಳ್ಳೆದಾಗುತ್ತದೆ, ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಇಳಿಸಿದ್ರೆ, ಕಾಂಗ್ರೆಸ್ ಗೆ ನಷ್ಟವಾಗಲಿದೆ ಎಂದ ರಾಜುಗೌಡ, ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಿಜೆಪಿನವರು ಸಿಎಂ ಸ್ಥಾನದಿಂದ ಇಳಿಸಿದಾಗ ಬಿಜೆಪಿಗೆ ಏನು ಗತಿ ಬಂತೊ,ಅದೆ ಗತಿ ಕಾಂಗ್ರೆಸ್ ಗೆ ಬರುತ್ತದೆ, ಸಿದ್ದರಾಮಯ್ಯ ಇದ್ದಿರುವದಕ್ಕೆ ಕಾಂಗ್ರೆಸ್ ಗೆ ನೆಮ,ಫೇಮ್ ಇದೆ, ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದ್ರೆ ಕಾಂಗ್ರೆಸ್ ಕೋಮಾಗೆ ಹೋಗಲಿದೆ, ಡಿಸಿಎಂ ಡಿಕೆಶಿ ಅವರಿಗೆ ದೇವರೆ ಕಾಪಾಡಬೇಕು, ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ನವರು ಸರಿಯಾಗಿ ಆಡಳಿತ ಮಾಡಲು ಬಿಡುತ್ತಿಲ್ಲ, ಸಿಎಂ ಕುರ್ಚಿ ಕಿತ್ತಾಟದಲ್ಲಿ ಸರಕಾರ ಸರಕಾರ ಅಭಿವೃದ್ಧಿ ಮರೆತಿದ್ದಾರೆ, ರೈತರ ಸಮಸ್ಯೆ ಕೇಳುತ್ತಿಲ್ಲ, ರೈತರ ಸಮಸ್ಯೆ ಮರೆತು ಸಿಎಂ ಕುರ್ಚಿ ಗಾಗಿ ಅಂಟಿಕೊಂಡು ಕುಳಿತಿದ್ದಾರೆ, ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ಬಿಡಲ್ಲ ಅನ್ನುತ್ತಾರೆ, ಡಿಕೆಶಿ ಅವರು ನಾನು ಸಿಎಂ ಅಗುವತನಕ ಬಿಡಲ್ಲ ಎನ್ನುತ್ತಾರೆ, ಇಬ್ಬರ ಕಚ್ಚಾಟದಲ್ಲಿ ರಾಜ್ಯದಲ್ಲಿ ಸರಕಾರ ಇದೆಯೋ ಇಲ್ಲವೋ ಎಂಬುದು ಗೊತ್ತಾಗುತ್ತಿಲ್ಲ, ರಾಜಕೀಯ ಬೆಳವಣಿಗೆ ಟಿವಿಯಲ್ಲಿ ನೋಡಿದರೆ ಬಿಗ್ ಬಾಸ್ ತರಹ ಆಗಿದೆ, ದಲಿತರನ್ನು ಸಿಎಂ ಮಾಡುವ ಬಗ್ಗೆ ಚರ್ಚೆ ಮಾಡುತ್ತಾರೆ, ಕರ್ನಾಟಕದಲ್ಲಿ ದಲಿತರನ್ನು ಸಿಎಂ ಮಾಡುವದಿಲ್ಲ ಇಂತಹ ವಿಷಯ ಬಂದಾಗ ಟ್ರಂಪ್ ಕಾರ್ಡ್ ನಂತೆ ಯುಸ್ ಮಾಡಿಕೊಂಡು ವೋಟ್ ಹಾಕಿಸಿಕೊಳ್ಳುತ್ತಾರೆ, ಯಾವ ದಲಿತರನ್ನು ಸಿಎಂ ಮಾಡಲ್ಲ, ದಲಿತರನ್ನು ಸಿಎಂ ಮಾಡುವದಿದ್ದರೆ ಮಲ್ಲಿಕಾರ್ಜುನ ಖರ್ಗೆ ಸಾಬ್ರೆಗೆ ಯಾವತ್ತೊ ಸಿಎಂ ಮಾಡಬೇಕಿತ್ತು, ಖರ್ಗೆ ಸಾಬ್ರಿಗು,ಪರಮೇಶ್ವರ ಸಾಬ್ರಿಗು,ಮುನಿಯಪ್ಪ ಅವರಿಗೆ ಸೇರಿ ಯಾರಿಗು ಸಿಎಂ ಮಾಡಲ್ಲ, ಇಂತಹ ಪರಿಸ್ಥಿತಿ ಬಂದಾಗ ಚರ್ಚೆ ಮಾಡುತ್ತಾರೆ, ಆಗ ಟೈಮ್ ನಲ್ಲಿ ಬೆರೆಯವರಿಗೆ ಕುರ್ಚಿ ಕೊಡುತ್ತಾರೆ, ದಲಿತರನ್ನು ಸಿಎಂ ಮಾಡಿದ್ರೆ ನಿವೇ ಬಂದು ರಿಪ್ಲೈ ಕೇಳಿ, ದಲಿತರನ್ನು ಸಿಎಂ ಮಾಡಲ್ಲ ಕಚ್ಚಾಟ ಆಗುತ್ತಿರುವದಕ್ಕೆ ಸುಮ್ಮನೆ ಹೇಳುತ್ತಾರೆ, ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಇಳಿಸಿದ್ರೆ ಕಾಂಗ್ರೆಸ್ ಸರಿಯಾಗಿ ಅನುಭವಿಸುತ್ತದೆ, ಯಾರು ಸರಕಾರ ಪತನ ಮಾಡಲ್ಲ, ಸಿದ್ದರಾಮಯ್ಯ ಅವರನ್ನು ಇಳಿಸಿದರೆ ಸರಕಾರ ಕೋಮಾ ಸ್ಟೆಜ್ ಗೆ ಹೋಗುತ್ತದೆ, ಈಗ ಸರಕಾರ ಕೋಮಾದಲ್ಲಿ ಮುಂದೆ ಕಾಂಗ್ರೆಸ್ ಪಕ್ಷ ಕೋಮಾಗೆ ಹೋಗುತ್ತದೆ, ಸಿಎಂ ಕುರ್ಚಿ ಗುದ್ದಾಟ ನಡೆಯುತ್ತಿದ್ದರು ಕಾಂಗ್ರೆಸ್ ಹೈಕಮಾಂಡ್ ಯಾವುದೇ ಹೇಳಿಕೆ ಕೊಡಲು ಸಿದ್ದವಿಲ್ಲ, ಗೊಂದಲ ಬಗೆಹರಿಸಲು ರೆಡಿ ಇಲ್ಲ, ನಾಳೆ ಅವರ ಮನೆಗೆ ಅವರು ಇವರ ಮನೆಗೆ ಅವರು ಉಪಹಾರಕ್ಕೆ ಹೋಗುತ್ತಾರೆ, ನಾವು ಈ ಸರಕಾರ ಪೂರ್ಣಾವಧಿ ಇರಬೇಕು..! ಇಲ್ಲ ಅನ್ನುವದಿಲ್ಲ, ರಾಜ್ಯದ ಜನರು ಈಗಾಗಲೇ ಕಾಂಗ್ರೆಸ್ 140 ಗೆ ಸ್ಥಾನ ನೀಡಿದ್ದಾರೆ, ಈಗ ಅವರೇ ಕಚ್ಚಾಟ ಮಾಡಿ ರೋಡಿಗೆ ಬರುವ ಕೆಲಸ ಮಾಡುತ್ತಿದ್ದಾರೆ
ಸಿಎಂ ಕುರ್ಚಿ ಕಿತ್ತಾಟದ ಗೊಂದಲ ಶೀಘ್ರವಾಗಿ ಬಗೆ ಹರಿಸಬೇಕೆಂದ ರಾಜುಗೌಡ
ಸಿಎಂ ಕುರ್ಚಿ ಕಿತ್ತಾಟದ ಗೊಂದಲ ಶೀಘ್ರವಾಗಿ ಬಗೆ ಹರಿಸಬೇಕೆಂದ ರಾಜುಗೌಡ





