ಹೆಚ್.ಎಂ. ರೇವಣ್ಣನವರು ಹಿಂದುಳಿದ ವರ್ಗಗಳ ಕುರುಬ ಸಮಾಜದ ಹಿರಿಯ ನಾಯಕರಾಗಿದ್ದು, ಜವಳಿ ಮತ್ತು ರೇಷ್ಮೆ ಇಲಾಖೆಯ ಸಚಿವರಾಗಿ, ಸಾರಿಗೆ ಮಂತ್ರಿಗಳಾಗಿ, ಕರ್ನಾಟಕ ಪ್ರದೇಶ ಕಾಂಗ್ರೇಸ್ ಪಕ್ಷದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಕರ್ನಾಟಕ ಸರ್ಕಾರದ ಮುಖ್ಯ ಯೋಜನೆಗಳಲ್ಲಿ ಒಂದಾದ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಯ ಪ್ರಸ್ತುತ ಅನುಷ್ಠಾನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಕಳೆದ ವಿಧಾನಸಭೆ ಸ್ಥಳೀಯ ಸಂಘ ಸಂಸ್ಥೆಗಳ ಚುನಾವಣೆಗಳು ಮತ್ತು ಲೋಕಸಭೆ ಹಾಗೂ ವಿವಿಧ ಉಪ ಚುನಾವಣೆಗಳು ಕಾಂಗ್ರೇಸ್ ಪಕ್ಷ ಗೆಲ್ಲಲು ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಸರ್ಕಾರ ರಚಿಸಲು ಹೆಚ್.ಎಂ. ರೇವಣ್ಣನವರ ಸೇವೆ ಬಹಳ ಮುಖ್ಯವಾದದ್ದು. ಹೆಚ್.ಎಂ. ರೇವಣ್ಣನವರು ಕಾಂಗ್ರೇಸ್ (ಐ) ಪಕ್ಷಕ್ಕೆ ಸೇವೆ ಸಲ್ಲಿಸಿದ ಸೇವಾ ಹಿರಿತನ ಗುರುತಿಸಿ, ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಸಚಿವರನ್ನಾಗಿ ಮಾಡಬೇಕೆಂದು ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಮಾನ್ಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಾ. ಮಲ್ಲಿಕಾರ್ಜುನ ಎಂ. ಖರ್ಗೆ ರವರಿಗೆ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೇಸ್ (ಐ) ಪಕ್ಷದ ಮಾನ್ಯ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ ರವರಿಗೆ ಕಲಬುರಗಿ ಜಿಲ್ಲೆ ಕುರುಬ ಸಮಾಜದ ಪರವಾಗಿ ಆಗ್ರಹಿಸಲಾಗಿದೆ
ಸಚಿವ ಸಂಪುಟದಲ್ಲಿ ಹೆಚ್.ಎಂ. ರೇವಣ್ಣನವರನ್ನು ಸಚಿವರನ್ನಾಗಿ ಕಾಳಗಿ ತಾಲೂಕು ಅಧ್ಯಕ್ಷ ಮಾಲಫ್ಪ ಪೂಜಾರಿ ಆಗ್ರಹ
ಸಚಿವ ಸಂಪುಟದಲ್ಲಿ ಹೆಚ್.ಎಂ. ರೇವಣ್ಣನವರನ್ನು ಸಚಿವರನ್ನಾಗಿ ಕಾಳಗಿ ತಾಲೂಕು ಅಧ್ಯಕ್ಷ ಮಾಲಫ್ಪ ಪೂಜಾರಿ ಆಗ್ರಹ





