Google search engine
ಮನೆಈ ಸಂದರ್ಶನಕಲಬುರಗಿಯ ಹಸಿರುಹೆಜ್ಜೆಗಳು" ಅಡಿಯಲ್ಲಿ ಒಟ್ಟು ಐದು ಕಾರ್ಯಕ್ರಮಗಳಿಗೆ ಜುಲೈ 5ರಂದು ನಾವು ಚಾಲನೆ

ಕಲಬುರಗಿಯ ಹಸಿರುಹೆಜ್ಜೆಗಳು” ಅಡಿಯಲ್ಲಿ ಒಟ್ಟು ಐದು ಕಾರ್ಯಕ್ರಮಗಳಿಗೆ ಜುಲೈ 5ರಂದು ನಾವು ಚಾಲನೆ

“ಕಲಬುರಗಿಯ ಹಸಿರುಹೆಜ್ಜೆಗಳು” ಅಡಿಯಲ್ಲಿ ಒಟ್ಟು ಐದು ಕಾರ್ಯಕ್ರಮಗಳಿಗೆ ಜುಲೈ 5ರಂದು ನಾವು ಚಾಲನೆ

ವನಮಹೋತ್ಸವ:

ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ವತಿಯಿಂದ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಕಲ್ಯಾಣ ಕರ್ನಾಟಕ ಭಾಗವು ಅತಿ ಹೆಚ್ಚು ಒಣ ಭೂಮಿಯನ್ನು ಹೊಂದಿದ್ದು, ಅರಣ್ಯ ಪ್ರದೇಶವು 2% ಕ್ಕಿಂತ ಕಡಿಮೆಯಿದೆ. ಇದು ರಾಜ್ಯದ ಸರಾಸರಿ 22% ಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆಯಾಗಿದೆ.

ಇದರ ಹಿನ್ನೆಲೆಯಲ್ಲಿ, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಹಸಿರು ಹೊದಿಕೆಯನ್ನು ಹೆಚ್ಚಿಸಲು ವಿಶೇಷ ಪ್ರಯತ್ನಗಳನ್ನು ‘ ಕೈಗೊಳ್ಳಲಾಗುತ್ತಿದೆ. ಇದರೊಂದಿಗೆ, ಮರಗಳ ಉದ್ಯಾನವನಗಳ ಅಭಿವೃದ್ಧಿ, ಪರಿಸರ ಪ್ರವಾಸೋದ್ಯಮ ಚಟುವಟಿಕೆಗಳು, ಪರಿಸರ ಸಂರಕ್ಷಣೆ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ

ಈ ಬಾರಿ ಕಲ್ಯಾಣ ಕರ್ನಾಟಕದಲ್ಲಿ ಹಸಿರು ಹೊದಿಕೆಯನ್ನು ಹೆಚ್ಚಿಸಲು ವನಮಹೋತ್ಸವದ ಮೂಲಕ ಬೃಹತ್ ಅರಣೀಕರಣ ಅಭಿಯಾನವನ್ನು ನಡೆಸಲಾಗುತ್ತಿದೆ.

ಕಲ್ಯಾಣ ಕರ್ನಾಟಕದಲ್ಲಿ ಸಸಿಗಳನ್ನು ನೆಡಲು ಮತ್ತು ಮರದ ಉದ್ಯಾನವನದ ಅಭಿವೃದ್ಧಿಗೆ ಸುಮಾರು 53.55 ಕೋಟಿ ರೂಪಾಯಿಗಳ ವಿಶೇಷ ಹೆಚ್ಚುವರಿ ಆರ್ಥಿಕ ಹಂಚಿಕೆಯನ್ನು ನೀಡಲಾಗಿದೆ. ಪ್ರಸ್ತುತದ ಮಳೆಗಾಲದ ಅವಧಿಯಲ್ಲಿ 1,848 ಕಿ.ಮೀ ರಸ್ತೆ ಬದಿಯಲ್ಲಿ 8.5 ಲಕ್ಷ ಸಸಿಗಳನ್ನು ನೆಡಲಾಗುವುದು. ಸುಮಾರು 9,000 ಹೆಕ್ಟೇರ್ ಅರಣ್ಯ ಮತ್ತು ಸರ್ಕಾರಿ ಪ್ರದೇಶವನ್ನು ಪ್ಲಾಂಟೇಷನ್ ಅಡಿಯಲ್ಲಿ ತರಲಾಗುವುದು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!