ವಿಜಯಪುರ ಜಿಲ್ಲೆಯ ತಾಳಿಕೋಟೆ ನೂತನ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಚ್ ಎಸ್ ಪಾಟೀಲ ಸಭಾಭವನದಲ್ಲಿ ಅಕ್ಟೋಬರ್ 1ರಂದು ಒಂದು ದಿನದ ಸಮ್ಮೇಳನವನ್ನು ಮಾಡಲು ತೀರ್ಮಾನಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ ತಾಲೂಕ ಅಧ್ಯಕ್ಷರಾದ ಆರ್ ಎಲ್ ಕೊಪ್ಪದ ಅವರು ತಾಲೂಕ ಕನ್ನಡ ಸಾಹಿತ್ಯ ಪರಿಷತದ ಕಾರ್ಯಾಲಯದಲ್ಲಿ ಸುದ್ದಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಸಮ್ಮೇಳನದಲ್ಲಿ ಸುಮಾರು ಆರು ಸಾವಿರ ಜನರು ಸೇರಿಸಲು ಸಿದ್ಧತೆಗಳು ನಡೆದಿದೆ. ಕೆಲವೇ ದಿನಗಳಲ್ಲಿ ಸಮ್ಮೇಳನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವದು. ಕನ್ನಡಪರ ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು, ನಗರ ಹಾಗೂ ಗ್ರಾಮೀಣ ಭಾಗದ ಗಣ್ಯರು, ಕನ್ನಡಪರ ಅಭಿಮಾನಿಗಳು ಸೇರಿಕೊಂಡು ಈ ಸಮ್ಮೇಳನವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಈ ಸಮಯದಲ್ಲಿ ಕಸಾಪ ಪದಾಧಿಕಾರಿಗಳಾದ ಎಸ್ ವಿ ಜಾಮಗೊಂಡ, ಆರ್ ಎಸ್ ಹಿಪ್ಪರಗಿ, ಎಮ್ ಜಿ ಕತ್ತಿ, ಆರ್ ಎಮ್ ಹಂಚಾಟೆ, ಜೈಭೀಮ್ ಎಸ್ ಮುತ್ತಗಿ, ಪಿ ಬಿ ಗುಬ್ಬೆವಾಡ, ಬಿ ಆರ್ ಪೊಲೀಸಪಾಟೀಲ, ಎಮ್ ಎಚ್ ಹಂದ್ರಾಳ, ಸಂಗನಗೌಡ ಅಸ್ಕಿ, ಪ್ರಭುಗೌಡ ಚೌದ್ರಿ ಹಲವರು ಭಾಗವಹಿಸಿದ್ದರು.