ಬೆಂಗಳೂರಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ.. ಶಾಸಕ ರವಿಕುಮಾರ್ ಗಣಿಗ ಹೇಳಿಕೆ ವಿಚಾರ. ಸರ್ಕಾರ ಹಗರಣದಲ್ಲಿ ಸಿಲುಕಿದೆ. ಜನರ ಮನಸ್ಸಿನ ವಿಷಯ ಡೈವರ್ಟ್ ಮಾಡುವ ವಿಚಾರ ಇದು. ಡಿಕೆಶಿ ಹೋಗಿ ಬಿಜೆಪಿ ಸೆಂಟ್ರಲ್ ಲೀಡರ್ಸ್ ಭೇಟಿ ಮಾಡ್ತಿದ್ದಾರೆ. ಸರ್ಕಾರ ಇರುತ್ತೋ ಬೀಳುತ್ತೋ ಅನ್ನೋ ಆತಂಕದಲ್ಲಿದ್ದಾರೆ. ನಾವ್ಯಾರು ಕೂಡ ಸರ್ಕಾರ ಬೀಳಿಸಲ್ಲ. ನಾವು ಕಾಂಗ್ರೆಸ್ ನಾಯಕರಿಗೆ ಕೇಳ್ತೀನಿ. ಯಾವ ಲೀಡರ್ ನಿಮ್ಮಬಳಿ ಬಂದು ಮಾತಾಡಿದ್ದಾರೆ ಹೆಸರೇಳಿ. ಇದು ಭ್ರಷ್ಟಾಚಾರ ಮುಚ್ಚಿಹಾಕೋ, ವಿಷಯ ಡೈವರ್ಟ್ ಮಾಡುವ ವಿಚಾರಮ ಅಶೋಕ್ ಹೇಳಿಕೆ. ಕಾಂಗ್ರೆಸ್ ಸಿಎಂ ಬದಲಾವಣೆ ಪ್ಲಾನ್ ಬಿ, ಸಿ ವಿಚಾರ.ಸರ್ಕಾರ ಗ್ಯಾರಂಟಿ ಹೆಸರೇಳಿ ಸೋತಿದೆ.
ಎಲ್ಲದರ ಬೆಲೆ ಏರಿಕೆ ಮಾಡ್ತಿದೆ.
ಸರ್ಕಾರಕ್ಕೆ ಲಾಸ್ ಆಗ್ತಿದೆ.
ಹಾಲು, ಬಸ್, ನೀರು ದರ ಹೆಚ್ಚಳ ಮಾಡಿದ್ದೀರಿ.
ಕುಡಿಯುವ ಗಾಳಿಗೆ ಟ್ಯಾಕ್ಸ್ ಹಾಕಿದ್ರೆ ಇನ್ನೇನೂ ಉಳಿಯಲ್ಲ.
ಗಾಳಿ ಮೇಲೆ ತೆರಿಗೆ ಹಾಕಿದ್ರೆ ನೋಬೆಲ್ ಪ್ರಶಸ್ತಿ ಕೊಡ್ತಾರೆ.
ನೀವು ಪಾಪರ್ ಆಗಿದ್ದೀರಿ.
ಮುಂದಾಲೋಚನೆ ಇಲ್ಲದೆ, ಹಣ ಇಡದೆ ತೆರಿಗೆ ಬಾರ ಹಾಕಿದ್ದೀರಿ.
ಮತದಾರರ ಬಗ್ಗೆ ಕೀಳಾಗಿ ಮಾತಾಡ್ತಿದ್ದೀರಿ.
ಅವರಿಗೆ ಅನಿಸಿದೆ ಮುಂದೆ ನಾವು ಬರಲ್ಲ ಅಂತ.
ಈಗ ಎಷ್ಟಾಗುತ್ತೋ ಅಷ್ಟು ಲೂಟಿ ಹೊಡೆಯೋಣ ಅಂತ.
ಮುಂದೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಈಗ ಯಾರ್ಯಾರು ಸಿಎಂ ಆಗಬೇಕೋ ಆಗೋಣ ಅಂತ ಅವರಿಗನಿಸಿದೆ.
ಕಾಂಗ್ರೆಸ್ ಅತಂತ್ರ ಅಂತ ಆರೋಪ ಹೊರಿಸಿದ್ದಾರೆ.
ಯಾರು ಹಣ ಕೊಡ್ತೀವಿ ಅಂತ ಆರೋಪ ಹೊರಿಸಿದ್ರು ಹೆಸರೇಳಿ.
ಇಲ್ಲದಿದ್ರೆ ನೀವು ಹಿಟ್ ಆಂಡ್ ರನ್ ಆಗ್ತೀರಿ.