ಕಲಬುರಗಿ ನಗರದಲ್ಲಿನ ಸರ್ಕಾರಿ ಮಹಾವಿದ್ಯಾಲಯದ ಜಮೀನು ಖಾಸಗಿಯವರ ಪರಭಾರೆಯಾಗಿರುವುದನ್ನು ಖಂಡಿಸಿ ಭಾರತೀಯ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾ ಸಮಿತಿ ವತಿಯಿಂದ ಸುದ್ದಿಗೋಷ್ಟಿ ನಡೆಸಲಾಯಿತು
ನಗರದಲ್ಲಿನ ಪತ್ರಿಕಾ ಭವನವನಲ್ಲಿ SFI ಜಿಲ್ಲಾ ಸಂಚಾಲಕಿಯಾದ ಸುಜಾತಾ ಅವರು ಮಾತನಾಡಿ ಜಿಲ್ಲೆಯು ಪ್ರತಿ ಬಾರಿಯೂ ಪರೀಕ್ಷಾ ಫಲಿತಾಂಶದಲ್ಲಿ ಅತ್ಯಂತ ಕೊನೆಯ ಸ್ಥಾನದಲ್ಲಿ ಬರುವುದನ್ನು ನೋಡಿರುತ್ತೀರಿ, ಶೈಕ್ಷಣಿಕ ಗುಣಮಟ್ಟ ಎತ್ತರಿಸಿ ಮಕ್ಕಳ ಸರ್ವಾಂಗೀಣ ಅಭಿವೃಧ್ದಿಗೆ ಕ್ರಮವಹಿಸಬೇಕಾದ ಈ ಸಂದರ್ಭದಲ್ಲಿ ಸರಕಾರವೇ ಮಹಾವಿದ್ಯಾಲಯಕ್ಕೆ ಸಂಬಂಧಪಟ್ಟ ಜಾಗವನ್ನು ಖಾಸಗಿ ಸಂಘಕ್ಕೆ ಪರಭಾರೆ ಮಾಡುವ ನಿರ್ಣಯ ತೆಗೆದುಕೊಂಡಿದ್ದು ಖಂಡನೀಯ, ಸರ್ಕಾರವು ಅದಷ್ಟು ಬೇಗ ಈ ವಿಷಯವನ್ನು ಕೈ ಬಿಡದಿದ್ದರೇ ನಾವು ಬೃಹತ್ ಪ್ರಮಾಣದಲ್ಲಿ ವಿದ್ರಾರ್ಥಿಗಳೆಲ್ಲರೂ ಸೇರಿ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ಕೊಟ್ಟರು.
ಸುದ್ದಿಗೋಷ್ಟಿಯಲ್ಲಿ ಸಹ ಸಂಚಾಲಕ ಸರ್ವೇಶ ಮಾವಿನಕರ, ಭರತ ಕುಮಾರ, ಅಭಿಷೇಕ ಮೇತ್ರಿ, ಕುಶಲ ರಾಠೋಡ, ಯುವರಾಜ ಚನ್ನಾ ರಾಠೋಡ, ಅಣ್ಣಾರಾಯ ಪಟೇಲ್, ಚಂದ್ರಕಾಂತ ರಾಠೋಡ ಇದ್ದರು