ಕಲಬುರಗಿ ನಗರದಲ್ಲಿನ ಎಸ್ ಎಸ್ ವಿ ಚಾನೆಲ್ ಸಭಾಂಗಣದಲ್ಲಿ SSV ಪಿಜಿ ಡಿಪ್ಲೋಮಾ ಕಾಲೇಜು, SSV TV ವಾಹಿನಿ ಹಾಗೂ ಸರ್ವಜ್ಞ ಕಾಲೇಜಿನ ಡ್ರಾಮಾ ಧಮಾಕಾ ಜ್ಯೂನಿಯರ್ಸ್ ಕಾರ್ಯಕ್ರಮದ ಸಹ ಪಾಯೋಜಕರಾದ ಚೆನ್ನಾರೆಡ್ಡಿ ಪಾಟೀಲ್ ಅವರ ಸಂಯುಕ್ತಾಶ್ರಯದಲ್ಲಿ ಡ್ರಾಮಾ ಧಮಾಕಾ ಕಾರ್ಯಕ್ರಮಕ್ಕೆ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಕಾರ್ಯಕ್ರಮವು ಜರುಗಿತು
ಎಸ್ ಎಸ್ ವಿ ಟಿವಿಯ ಡ್ರಾಮಾ ಧಮಾಕಾ ಕಾರ್ಯಕ್ರಮದ ಎರಡೂ ಹಂತದ ಆಯ್ಕೆ ಪ್ರಕ್ರಿಯೆಯು ಪೂರ್ಣಗೊಂಡಿದ್ದು, ಕಲಬುರಗಿ ನಗರದಲ್ಲಿನ ಎಸ್ ಎಸ್ ವಿ ಚಾನೆಲ್ ಸಭಾಂಗಣದಲ್ಲಿ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ರಾಜೇಂದ್ರ ಶಿಂಧೆ ಹಾಗೂ ಎಲ್ಲಾ ಅತಿಥಿ ಗಣ್ಯರು ಸೇರಿದಂತೆ ಡ್ರಾಮಾಗೆ ಆಯ್ಕೆಗೊಂಡ ಮಕ್ಕಳಿಂದ ಬಸವೇಶ್ವರರ ಹಾಗೂ ಭಗವಾನ್ ಬುಧ್ದರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಮಕ್ಕೆ ಚಾಲನೆ ನೀಡಲಾಯಿತು. ಕಲಬುರಗಿ ರಂಗಾಯಣದ ನೂತನ ನಿರ್ದೇಶಕರಾದ ಸುಜಾತ ಜಂಗಮಶೆಟ್ಟಿ ಅವರು ಮಾತನಾಡಿ ನಮ್ಮ ಕಲ್ಯಾಣ ಕರ್ನಾಟಕದ ಅವಕಾಶ ವಂಚಿತ ಮಕ್ಕಳಿಗೆ ಇದೊಂದು ಒಳ್ಳೆಯ ಅವಕಾಶವಾಗಿದ್ದೂ ಮಕ್ಕಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾಗಬಾರದು ಎಂದರು. ಡ್ರಾಮಾ ಧಮಾಕಾ ಜ್ಯೂನಿಯರ್ಸ್ ಕಾರ್ಯಕ್ರಮದ ಸಹ ಪಾಯೋಜಕರಾದ ಸರ್ವಜ್ಞ ಕಾಲೇಜಿನ ಚೆನ್ನಾರೆಡ್ಡಿ ಪಾಟೀಲ್ ಅವರು ಡ್ರಾಮಾ ಧಮಾಕ ಕಾರ್ಯಕ್ರಮದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್.ಎಸ್.ವಿ ಟಿವಿ ನಿರ್ದೇಶಕರಾದ ವಿಜೇಂದ್ರ ಕೋಡ್ಲಾ ಸೇರಿದಂತೆ ಕಾರ್ಯಕ್ರಮಕ್ಕೆ ಆಯ್ಕೆಗೊಂಡ ಮಕ್ಕಳ ಪೋಷಕರು ಇದ್ದರು