ಇಂದು ಬೆಳಿಗ್ಗೆ ಕಲಬುರಗಿ ಏರ್ಪೋರ್ಟ್ ಮೇಲ್ ಐಡಿಗೆ ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆಯ ಮೇಲ್ ಒಂದು ಬಂದಿರುವುದರ ಬಗ್ಗೆ ಕಮಿಷನರ್ ಆರ್ ಚೇತನಕುಮಾರ ಅವರು ಸ್ಪಷ್ಟನೆ ನೀಡಿದ್ದಾರೆ
ಹೌದು ಇಂದು ಬೆಳಿಗ್ಗೆ ಕಲಬುರಗಿಯ ಏರ್ಪೋರ್ಟ್ ಮೇಲ್ ಐಡಿಗೆ ಬಾಂಬ್ ಹಾಕಿ ಸ್ಪೋಟಿಸುವುದಾಗಿ ಬೆದರಿಕೆಯ ಕರೆ ಬಂದಿದ್ದು ಇದರ ಬಗ್ಗೆ ಪೋಲೀಸರು ಹಾಗೂ ಶ್ವಾನ ದಳದವರು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಇನ್ನೂ ಇಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಕಲಬುರಗಿ ನಗರಕ್ಕೆ ಆಗಮಿಸುತ್ತಿರುವ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಇನ್ನೂ ಇದರ ಬಗ್ಗೆ ಕಲಬುರಗಿ ಸಿಟಿ ಕಮಿಷನರ್ ಆರ್ ಚೇತನ್ ಅವರು ಮಾಹಿತಿ ನೀಡಿದ್ದಾರೆ.





