ವಿಜಯಪುರ ನಗರದಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಿಂದಾಗಿ ವಿದ್ಯುತ್ ಸಂಪರ್ಕವನ್ನು ಕಟ್ ಮಾಡಲಾಗಿದೆ. ಈ ಹಿಂದೆ ಸೂಕ್ತ ಚರಂಡಿ ವ್ಯವಸ್ಥೆ ಮಾಡುವಂತೆ ಸ್ಥಳೀಯರು ಮಹಾನಗರ ಪಾಲಿಕೆಗೆ ಮನವಿ ಮಾಡಿದ್ದರು. ಆದ್ರೆ ಇದ್ಯಾವದನ್ನು ಪಾಲಿಕೆ ಮೇಯರ್ ಕಿಮಿ ಹಾಕಿಕೊಂಡಿದ್ದಿಲ್ಲ. ಇದೀಗ ಇಷ್ಟೆಲ್ಲಾ ಹಾನಿಯಾದ್ರನೂ ಪಾಲಿಕೆ ಮೇಯರ್ ಹಾಗೂ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಬಾರದಿರುವದು, ಇಲ್ಲಿಯ ಜನತೆ ಸಂಕಷ್ಟ ಆಲಿಸದೇ ಇರುವದು ಇಲ್ಲಿಯ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.





