ಕಲಬುರಗಿ: ಬಾಲ್ಯ ವಿವಾಹ ಮುಕ್ತಿ ರಥ ಯಾತ್ರೆಗೆ ಚಾಲನೆ ಕಲಬುರಗಿ ನಗರದಲ್ಲಿ ಬಾಲ್ಯ ವಿವಾಹ ತಡೆಗಟ್ಟಲು ಮತ್ತು ಜಾಗೃತಿ ಮೂಡಿಸಲು ‘ಬಾಲ್ಯ ವಿವಾಹ ಮುಕ್ತಿ ರಥ ಯಾತ್ರೆ’ಗೆ ಜಿಲ್ಲಾ ಪಂಚಾಯತಿ ಸಿಇಓ ಭಂವರಸಿಂಗ್ ಮೀನಾ ಚಾಲನೆ ನೀಡಿದರು. ಡಿಸಿ ಕಚೇರಿ ಮುಂದೆ ನಡೆದ ಕಾರ್ಯಕ್ರಮದಲ್ಲಿ ಈ ಯಾತ್ರೆಗೆ ಚಾಲನೆ ನೀಡಲಾಗಿದ್ದು, ಮೂರು ತಿಂಗಳ ಕಾಲ ಜಿಲ್ಲೆಯಾದ್ಯಂತ ಸಂಚರಿಸಿ ಬಾಲ್ಯ ವಿವಾಹದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಿದೆ





