ನಗರದ ಕಿದ್ವಾಯಿ ಆಸ್ಪತ್ರೆ ಹಿಂಭಾಗದಲ್ಲಿರುವ ಮಕ್ಕಳ ಪಾಲನಾ ಸಂಸ್ಥೆಗಳ ಸಂಕೀರ್ಣದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಬೆಂಗಳೂರು ನಗರ ಕೇಂದ್ರ ಹಾಗೂ ಸರ್ಕಾರಿ ಬಾಲಮಂದಿರಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ 2025-26ನೇ ಸಾಲಿನ ಅಂತರಾಷ್ಟ್ರೀಯ ದತ್ತು ಮಾಸಾಚರಣೆ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಬೆಂಗಳೂರು ನಗರ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿ-2ಯ ಅಧ್ಯಕ್ಷರಾದ ನಾಗರತ್ನ ಬಿ.ಎಂ ಅವರು ಉದ್ಘಾಟಿಸಿದರು ಇದೇ ಸಂದರ್ಭದಲ್ಲಿ ಬೆಂಗಳೂರು ನಗರ ಕೇಂದ್ರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಈರಾಸ್ವಾಮಿ ಬಿ, ಬೆಂಗಳೂರು ನಗರ ಸರ್ಕಾರಿ ಶಿಶುಮಂದಿರದ ಅಧೀಕ್ಷಕರಾದ ಶೀಲಾ ಬಿರಾದಾರ್, ಬೆಂಗಳೂರು ನಗರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ-1 ಯ ಅಧ್ಯಕ್ಷರಾದ ಕೆ.ಚಿತ್ರಾವತಿ, ಬೆಂಗಳೂರು ನಗರ ಸರ್ಕಾರಿ ಬಾಲ ಮಂದಿರದ ಆರೋಗ್ಯಾಧಿಕಾರಿಗಳಾದ ಡಾ. ನಿರ್ಮಲ ಟಿ, ಬೆಂಗಳೂರು ಸರ್ಕಾರಿ ಬಾಲಕರ ಬಾಲಮಂದಿರದ ಮುಖ್ಯೋಪಾದ್ಯಯರಾದ ಕೆ.ಎಸ್.ರಾಮಕೃಷ್ಣಯ್ಯ, ಬೆಂಗಳೂರು ನಗರ ಕೇಂದ್ರ ಜಿಲ್ಲಾ ಮಕ್ಕಳ ರಕ್ಷಣಾ ಘಟದ (ಅಸಾಂಸ್ಥಿಕ) ರಕ್ಷಣಾಧಿಕಾರಿಗಳಾದ ವೀರಪ್ಪ ಎಂ, ತೇಜಸ್ವಿನಿ ಕೆ.ಎನ್ ಸೇರಿದಂತೆ ಮಕ್ಕಳ ಕಲ್ಯಾಣ ಸಮಿತಿಗಳ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು