Home Uncategorized ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಗಿಳಿ ಶಾಸ್ತ್ರ ಕೇಳುವ ಮೂಲಕವೇ ವ್ಯಂಗ್ಯ

ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಗಿಳಿ ಶಾಸ್ತ್ರ ಕೇಳುವ ಮೂಲಕವೇ ವ್ಯಂಗ್ಯ

0
ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಗಿಳಿ ಶಾಸ್ತ್ರ ಕೇಳುವ ಮೂಲಕವೇ ವ್ಯಂಗ್ಯ

ರಾಜ್ಯದಲ್ಲಿ ಅಧಿಕಾರ ಹಂಚಿಕೆ ಫೈಟ್ ವಿಚಾರ ಸಂಬಂಧ ಬಿಜೆಪಿಯವರು ಗಿಳಿ ಶಾಸ್ತ್ರ ಕೇಳಲಿ ಎಂದಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಗಿಳಿ ಶಾಸ್ತ್ರ ಕೇಳುವ ಮೂಲಕವೇ ವ್ಯಂಗ್ಯವಾಡಿದ್ದಾರೆ. ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರಾ? ಇಲ್ವಾ? ಎಂದು ಬಿಜೆಪಿಗರು ಗಿಳಿ ಶಾಸ್ತ್ರ ಕೇಳಿದ್ದು,ಈ ವೇಳೆ ಗಿಳಿ ಚಂಬು ಇರುವ ಕಾರ್ಡ್ ತೆಗೆದಿದೆ. ಹೀಗಾಗಿ ಡಿ.ಕೆ.ಶಿವಕುಮಾರ್ ಸಿಎಂ ಆಗಲ್ಲ, ಅವರ ಕೈಗೆ ಚಂಬು ಎಂದು ಬಿಜೆಪಿಗರು ವ್ಯಂಗ್ಯವಾಡಿದ್ದಾರೆ. ಬಳಿಕ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆದರೆ ಜನರಿಗೆ ಒಳ್ಳೆಯದಾಗುತ್ತಾ ಎಂದು ಶಾಸ್ತ್ರ ಕೇಳಿದ್ದು, ಈ ವೇಳೆ ಗಿಳಿ ಹೂ ಇರುವ ಕಾರ್ಡ್ ತೆಗೆದಿದೆ. ಹೀಗಾಗಿ ಬಿಜೆಪಿಗರು ಸಿದ್ದರಾಮಯ್ಯ ಸಿಎಂ ಆಗಿದ್ರೆ ಜನರ ಕಿವಿಗೆ ಹೂ ಎಂದು ವಿಡಂಬನೆ ಮಾಡಿದ್ದಾರೆ

LEAVE A REPLY

Please enter your comment!
Please enter your name here

error: Content is protected !!