Home Uncategorized ಗುಂಡಗುರ್ತಿ ಮೂರಾರ್ಜಿ ದೇಸಾಯಿ ವಸತಿ ಕಾಲೇಜಿನ ಪ್ರಾಂಶುಪಾಲರ ಅಮಾನತ್ತಿಗೆ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಒತ್ತಾಯ

ಗುಂಡಗುರ್ತಿ ಮೂರಾರ್ಜಿ ದೇಸಾಯಿ ವಸತಿ ಕಾಲೇಜಿನ ಪ್ರಾಂಶುಪಾಲರ ಅಮಾನತ್ತಿಗೆ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಒತ್ತಾಯ

0
ಗುಂಡಗುರ್ತಿ ಮೂರಾರ್ಜಿ ದೇಸಾಯಿ ವಸತಿ ಕಾಲೇಜಿನ  ಪ್ರಾಂಶುಪಾಲರ ಅಮಾನತ್ತಿಗೆ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಒತ್ತಾಯ

ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಗುಂಡಗುರ್ತಿ ಮೂರಾರ್ಜಿ ದೇಸಾಯಿ ವಸತಿ ಕಾಲೇಜಿನ ಪ್ರಾಂಶುಪಾಲರ ಅಮಾನತ್ತಿಗೆ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಕರ್ನಾಟಕ ಒತ್ತಾಯಿಸಿದೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಗೆ ಒಳವಡುವ ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಗುಂಡಗುರ್ತಿ ಮೂರಾರ್ಜಿ ದೇಸಾಯಿ ವಸತಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶಿವಮ್ಮ ಬಡಿಗೇರ ಅವರು ಬಡ ಮಕ್ಕಳಿಂದ ಹಣವನ್ನು ಪಡೆದು ಪ್ರವೇಶ ಕೊಟ್ಟಿದ್ದು ಸಮಾರು 19 ಪ್ರಥಮ ಪಿ ಯು ಸಿ ಮಕ್ಕಳಿಂದ ಮತ್ತು 12 ದ್ವಿತೀಯ ಪಿ ಯು ಸಿ ಮಕ್ಕಳಿಂದ ಹಣವನ್ನು ಪಡೆದು ಪ್ರವೇಶ ಕೊಟ್ಟಿದ್ದು ಒಂದು ವಿದ್ಯಾರ್ಥಿಗೆ 5000 ರಿಂದ 40000 ವರೆಗೆ ಪಡೆದು ಸುಮಾರು 13 ಲಕ್ಷ ರೂಪಾಯಿ ವರೆಗೂ ಎಲ್ಲ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಗಳಿಂದ ಹಣ ವಸೂಲಿ ಮಾಡಿರುತ್ತಾರೆ.ಪಾಲಕರು ಹಣವನ್ನು ಕೊಟ್ಟಿರುವುದು ಒಪ್ಪಿಕೊಂಡಿರುತ್ತಾರೆ ಮತ್ತು ಡಿ ದರ್ಜೆಯ ಇಬ್ಬರು ಕೆಲಸಾಗರರಿಂದ ಕೂಡ ನಿಮಗೆ ಖಾಯಂ ಮಾಡುತ್ತೇನೆಂದು ಆಮಿಷ ಒಡ್ಡಿ 16 ಸಾವಿರ ಪಡೆದಿರುತ್ತಾರೆ ಮತ್ತು ದ್ವಿತೀಯ ಪಿ ಯು ಸಿ ಮುಗಿಸಿ ಅಂಕಪಟ್ಟಿ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಪ್ರತಿಯೊಂದು ವಿದ್ಯಾರ್ಥಿಗಳಿಂದ 500 ರೂಪಾಯಿ ಪಡೆದಿರುತ್ತಾರೆ ಅದರಿಂದ ಸರ್ಕಾರಿ ಕಾಲೇಜು ಬಡಮಕ್ಕಳು ಓದುವ ಕಾಲೇಜನಲ್ಲಿ ಇಂಥ ಭ್ರಷ್ಟಾಚಾರ ಮಾಡುತ್ತಿರುವ ಪ್ರಾಂಶುಪಾಲರಾದ ಶಿವಮ್ಮ ಬಡಿಗೇರ್ ಅವರ ವಿರುದ್ಧ ಸೂಕ್ತ ತನಿಖೆ ನಡೆಸಿ, ಅವರನ್ನು ಸೇವೆಯಿಂದ ಅಮಾನತ್ತು ಮಾಡಿ, ಬಡ ವಿದ್ಯಾರ್ಥಿಗಳಿಂದ ಪಡೆದ ಹಣವನ್ನು ಪ್ರತಿಯೊಬ್ಬರಿಗೆ ಹಿಂತಿರುಗಿಸಿ ಕೊಡಿಸಬೇಕೆಂದು ಆಗ್ರಹಿಸಲಾಗಿದೆ

LEAVE A REPLY

Please enter your comment!
Please enter your name here

error: Content is protected !!