Home Uncategorized ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಟಿ, ಪ್ರವಾಹದಿಂದ ಹಾನಿಗೀಡಾದ ಮುಂಗಾರು ಬೆಳೆಗೆ 268 ಕೋಟಿ ರೂಪಾಯಿ ಪರಿಹಾರ ಬಿಡುಗಡೆ

ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಟಿ, ಪ್ರವಾಹದಿಂದ ಹಾನಿಗೀಡಾದ ಮುಂಗಾರು ಬೆಳೆಗೆ 268 ಕೋಟಿ ರೂಪಾಯಿ ಪರಿಹಾರ ಬಿಡುಗಡೆ

0
ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಟಿ, ಪ್ರವಾಹದಿಂದ ಹಾನಿಗೀಡಾದ ಮುಂಗಾರು ಬೆಳೆಗೆ 268 ಕೋಟಿ ರೂಪಾಯಿ ಪರಿಹಾರ ಬಿಡುಗಡೆ

ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಟಿ, ಪ್ರವಾಹದಿಂದ ಹಾನಿಗೀಡಾದ ಮುಂಗಾರು ಬೆಳೆಗೆ 268 ಕೋಟಿ ರೂಪಾಯಿ ಪರಿಹಾರ ಬಿಡುಗಡೆಯಾಗಿದೆ. ಸುಮಾರು 3.07 ಲಕ್ಷ ಹೆಕ್ಟೇರ್ ಬೆಳೆ ನಷ್ಟಕ್ಕೆ 4,15,989 ರೈತರಿಗೆ ಪ್ರತಿ ಹೆಕ್ಟೇರ್ಗೆ 8,500 ರೂಪಾಯಿ ನೀಡಲಾಗುತ್ತಿದೆ. ಆಳಂದ ತಾಲೂಕಿಗೆ ಅತಿ ಹೆಚ್ಚು ಪರಿಹಾರ ಮಂಜೂರಾಗಿದ್ದು, ವಾರದೊಳಗೆ ರೈತರ ಖಾತೆಗೆ ಹಣ ಜಮಾ ಆಗಲಿದೆ ಕಲಬುರಗಿ: ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿಗೀಡಾದ ಮುಂಗಾರಿನ ಬೆಳೆಗೆ ಪರಿಹಾರವಾಗಿ ಮೊದಲ ಕಂತಿನಲ್ಲಿ ಜಿಲ್ಲೆಗೆ 268 ಕೋಟಿ ರೂ. ಮಂಜೂರಾಗಿದೆ. ಕನಿಷ್ಠ ಒಂದು ಹೆಕ್ಟೇರ್ ಖುಷ್ಕಿ ಜಮೀನಿನ ಬೆಳೆ ಹಾಳಾದ ಪ್ರತಿ ರೈತರ ಖಾತೆಗೆ 8,500 ರೂ. ಹಣ ಶೀಘ್ರ ಬರಲಿದೆಮುಂಗಾರಿನ ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ಸುರಿದ ಭಾರಿ ಮಳೆ ಹಾಗೂ ಭೀಮೆಯ ನೆರೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿತ್ತು. ನಂತರ ಕಂದಾಯ ಮತ್ತು ಕೃಷಿ ಇಲಾಖೆ ಜಂಟಿ ಸಮೀಕ್ಷೆಯಲ್ಲಿ ಸುಮಾರು 3.07 ಲಕ್ಷ ಹೆಕ್ಟೇರ್ ಬೆಳೆ ಹಾಳಾಗಿದೆ ಎಂದು ರಾಜ್ಯ ಸರಕಾರಕ್ಕೆ ವರದಿ ಸಲ್ಲಿಕೆ ಮಾಡಿದ್ದವು. ಅದರ ಆಧಾರದ ಮೇಲೆ 4,15,989 ರೈತರಿಗೆ ಮೊದಲ ಹಂತದಲ್ಲಿ ಸುಮಾರು 268.33 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ

LEAVE A REPLY

Please enter your comment!
Please enter your name here

error: Content is protected !!