.ಕಲಬುರಗಿ: ದರ್ಗಾ ಏರಿಯಾದಲ್ಲಿ SIT ಅಧಿಕಾರಿಗಳ ದಾಳಿ ಕಲಬುರಗಿ ನಗರದ ರೋಜಾ ಬಡಾವಣೆಯ ದರ್ಗಾ ಏರಿಯಾದಲ್ಲಿನ ಮನೆ SIT ಅಧಿಕಾರಿಗಳು ದಾಳಿ ಮಾಡಿದ ಘಟನೆ ಇಂದು ನಡೆದಿದೆ. ದರ್ಗಾ ಏರಿಯಾದಲ್ಲಿನ ಅಶ್ವಕ್ ಎನ್ನುವವರ ಮನೆ ಮೇಲೆ ದಾಳಿ ಮಾಡಲಾಗಿದೆ. ಇನ್ನು ಸರ್ಚ್ ವಾರೆಂಟ್ ಜೊತೆ ಬಂದು SIT ಆಧಿಕಾರಿಗಳು ಮನೆ ಶೋಧ ಮಾಡುತ್ತಿದ್ದಾರೆ. ಅಶ್ವಾಕ್ ಸದ್ಯ ದುಬೈ ನಲ್ಲಿರುವ ಮಾಹಿತಿ ದೊರಕಿದ್ದು ಇದು ಅವನದ್ದೇ ಮನೆಯಾಗಿದೆ