Home Uncategorized ನೂತನವಾಗಿ ನಿರ್ಮಾಣವಾದ ಆಕ್ಸಿಲೈಫ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಉದ್ಘಾಟಿಸಿದರು

ನೂತನವಾಗಿ ನಿರ್ಮಾಣವಾದ ಆಕ್ಸಿಲೈಫ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಉದ್ಘಾಟಿಸಿದರು

0

ಕಲಬುರಗಿ ನಗರದಲ್ಲಿನ ಬಸ್ ನಿಲ್ದಾಣದ ಹತ್ತಿರ ನೂತನವಾಗಿ ನಿರ್ಮಾಣವಾದ ಆಕ್ಸಿಲೈಫ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ಅವರು ಉದ್ಘಾಟಿಸಿದರು ಕಲಬುರಗಿ ನಗರದಲ್ಲಿನ ಸೆಂಟ್ರಲ್ ಬಸ್ ನಿಲ್ದಾಣದ ಹತ್ತಿರ ನಿರ್ಮಾಣವಾದ ೧೦೦ ಬೆಡ್’ಗಳ ಸಾಮರ್ಥ್ಯವುಳ್ಳ ಹಾಗೂ ೧೬ ಐಸಿಯು ಬೆಡ್ ಹೊಂದಿರುವ ಆಕ್ಸಿಲೈಫ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ರಿಬ್ಬನ್ ಕತ್ತರಿಸಿ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಸಚಿವರು ಕಲಬುರಗಿ ನಗರದಲ್ಲಿ ಅನೇಕ ಆಸ್ಪತ್ರೆಗಳು ಬರುತ್ತಿದ್ದು, ಒಳ್ಳೆಯ ಗುಣಮಟ್ಟ ಹೊಂದಿರುವ ಆಕ್ಸಿಲೈಫ್ ಆಸ್ಪತ್ರೆ ನಿರ್ಮಾಣವಾಗಿದ್ದು, ಸಂತೋಷ ಅನಿಸುತ್ತದೆ. ಕಲಬುರಗಿ ವೇಗವಾಗಿ ಬೆಳೆಯುತ್ತಿರುವ ಜಿಲ್ಲೆ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಡಾಕ್ಟರ್ ಇಂಜಿನಿಯರ್ ಆಗುತ್ತಿದ್ದು ಇದರಿಂದ ಈ ಭಾಗಕ್ಕೆ ತುಂಬಾ ಅನುಕೂಲ ಆಗ್ತಿದೆ ಎಂದರು. ಈ ಸಂದರ್ಭದಲ್ಲಿ ಬೆಂಗಳೂರಿನ ಎಕ್ಸ್ ಮೇಯರ್ ಸಂಪತ್ ರಾಜ್, ಎಂ ಎಲ್ ಸಿ ಜಗದೇವ ಗುತ್ತೇದಾರ್, ಮಹಿಬೂಬ್ ಸಾಹೇಬ್, ಶಾಸಕರಾದ ಅಲ್ಲಮಪ್ರಭು ಪಾಟಿಲ್, ಬಸವರಾಜ ಮತ್ತಿಮಡು, ಖನಿಜ್ ಫಾತಿಮಾ, ಆಸ್ಪತ್ರೆಯ ನಿರ್ದೇಶಕ ಚಂದ್ರಕಾಂತ ಗದ್ದಗಿ, ಚೆನ್ನಮ್ಮ ಗದ್ದಗಿ,ಪ್ರಿಯಾ ಗದ್ದಗಿ, ಅನಮೋಲ್ ಮೋದಿ, ಕಾಡಾ ಮಾಜಿ ಅದ್ಯಕ್ಷ ಮಹಾಂತಪ್ಪ ಸಂಗಾವಿ, ಶರಣಪ್ಪ ಗದ್ದಗಿ, ಡಾ. ಕೆ ಎಸ್ ಬಂಧು ಸೇರಿದಂತೆ ಇನ್ನಿತರ ಅತಿಥಿಗಳು ಆಸ್ಪತ್ರೆಯ ಸಿಬ್ಬಂದಿ ಹಲವರು ಇದ್ದರು

LEAVE A REPLY

Please enter your comment!
Please enter your name here

error: Content is protected !!