ಬೀದರ್: ಚೆಂಡು ಹೂಗಳ ನಡುವೆ ಗಾಂಜಾ ಬೆಳೆದ ರೈತ ಅರೆಸ್ಟ್ ಬೀದರ್ ಜಿಲ್ಲೆ ಕಮಲನಗರ ತಾಲೂಕಿನ ಸಾವಳಿ ಗ್ರಾಮದಲ್ಲಿ ರೈತ ಸಂತೋಷ್ ಎಂಬಾತ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದು ಪೊಲೀಸರ ಬಲೆಗೆ ಬಿದ್ದದ್ದಾನೆ. ಹೂವಿನ ಗಿಡಗಳ ಮಧ್ಯೆ ಅಕ್ರಮವಾಗಿ ಬೆಳೆದ 15 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ ಮಾಡಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಪೊಲೀಸರು ಗಾಂಜಾ ಜಪ್ತಿ ಮಾಡಿದ್ದಾರೆ. 15 ಲಕ್ಷ ಮೌಲ್ಯದ 51 ಗಿಡ ಜಪ್ತಿ ಮಾಡಿ ಆರೋಪಿ ಸಂತೋಷ್ ನನ್ನ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಾದ್ದಾರೆ. ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ