Home Uncategorized ಕೊಳಗೇರಿ ಅಭಿವೃದ್ಧಿ ಮಂಡಳಿಯ 750 ಮನೆ ಹಂಚಿಕೆ ಪೂರ್ಣ ಮತ್ತೊಮ್ಮೆ ಮನೆ ಹಂಚಿಕೆ ಸರಿಯಲ್ಲ; ಬಿಜೆಪಿ ವಿರೇಶ ಹೂಗಾರ

ಕೊಳಗೇರಿ ಅಭಿವೃದ್ಧಿ ಮಂಡಳಿಯ 750 ಮನೆ ಹಂಚಿಕೆ ಪೂರ್ಣ ಮತ್ತೊಮ್ಮೆ ಮನೆ ಹಂಚಿಕೆ ಸರಿಯಲ್ಲ; ಬಿಜೆಪಿ ವಿರೇಶ ಹೂಗಾರ

0
ಕೊಳಗೇರಿ ಅಭಿವೃದ್ಧಿ ಮಂಡಳಿಯ 750 ಮನೆ ಹಂಚಿಕೆ ಪೂರ್ಣ  ಮತ್ತೊಮ್ಮೆ ಮನೆ ಹಂಚಿಕೆ ಸರಿಯಲ್ಲ; ಬಿಜೆಪಿ ವಿರೇಶ ಹೂಗಾರ

ಕೊಳಗೇರಿ ಅಭಿವೃದ್ಧಿ ಮಂಡಳಿಯ 750 ಮನೆ ಹಂಚಿಕೆ ಪೂರ್ಣ ಗೊಂಡಿದೆ ಮತ್ತೊಮ್ಮೆ ಮನೆ ಹಂಚಿಕೆ ಸರಿಯಲ್ಲ ಎಂದು ಬಿಜೆಪಿ ಉಪಾಧ್ಯಕ್ಷ ವಿರೇಶ ಹೂಗಾರ ಆಕ್ರೋಶ ವ್ಯಕ್ತಪಡಿಸಿದರು ಸೇಡಂ ಪಟ್ಟಣದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 750 ಮನೆಗಳು ರಾಜಕುಮಾರ ಪಾಟೀಲ ತೆಲ್ಕೂರ ಶಾಸಕರಿದ್ದಾಗ ಪಲಾನುಭವಿಗಳ ಆಯ್ಕೆ ಪೂರ್ಣಗೊಂಡಿದೆ ಆದರೆ ಅದೇ 750 ಮನೆಗಳು ಮತ್ತೊಮ್ಮೆ ಪಲಾನುಭವಿಗಳ ಆಯ್ಕೆ ಮಾಡಲು ಅಧಿಸೂಚನೆ ಹೊರಡಿಸಿರುವದು ಸರಿಯಲ್ಲ ಎಂದು ಬಿಜೆಪಿ ಮಂಡಳ ಉಪಾಧ್ಯಕ್ಷ ವಿರೇಶ ಹೂಗಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಪತ್ರಿಕಾ ಮಾದ್ಯಮದವರೊಂದಿಗೆ ಮಾತನಾಡಿ 2022-23 ನೇ ಸಾಲಿನಲ್ಲಿ ಭಾರತೀಯ ಪಕ್ಷ ಅಧಿಕಾರದಲ್ಲಿತ್ತು ರಾಜಕುಮಾರ ಪಾಟೀಲ ತೆಲ್ಕೂರ ಶಾಸಕರಾಗಿದ್ದರು ಅಂದಿನ ವಸತಿ ಸಚಿವ ವಿ ಸೋಮಣ್ಣ ಅವರನ್ನು ಕರೆಯಿಸಿ ಚಾಲನೆ ನೀಡಿಸಿದ್ದರು ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 750 ಮನೆಗಳು ಹಾಗೂ ಹೆಚ್ಚುವರಿ 90 ಮನೆಗಳು ಸೇರಿ ಒಟ್ಟು 840 ಮನೆಗಳು ಸಚಿವ ಸೋಮಣ್ಣ ಅಡಿಗಲ್ಲು ನೆರವೇರಿಸಿದರು 840 ಮನೆಗಳು ಆಯ್ಕೆ ಪೂರ್ಣಗೊಂಡಿದೆ ಒಮ್ಮೆ ಪಲಾನುಭವಿಗಳ ಆಯ್ಕೆಯಾದ ನಂತರ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಇರುವದಿಲ್ಲ ಮತ್ತೊಮ್ಮೆ ಅರ್ಜಿ ಕರೆದಿರಿವುದು ನಿಲ್ಲಿಸಬೇಕು ಮುಂದುವರೆಸಿದರೆ 840 ಪಲಾನುಭವಿಗಳೊಂದಿಗೆ ಪುರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಶಿವಾನಂದ ಸ್ವಾಮಿ, ಪ್ರಮುಖರಾದ ಓಂಪ್ರಕಾಶ ಪಾಟೀಲ, ರಾಘವೇಂದ್ರ ಮೆಕಾನಿಕ್, ಮಹಾದೇವಪ್ಪ ಗೋಣಿ, ನೀಲಾಧರ ಶೆಟ್ಟಿ, ನಾಗೇಂದ್ರಪ್ಪ ರಾಜಾಪೂರ, ಲಕ್ಮಣ್ಣ ಮಡಿವಾಳ, ಅರ್ಜುನ ಚನ್ನಕ್ಕಿ, ರಾಮು ಕಣಿಕಲ್, ಹಣಮಂತ ಚೋಟಿ ಗಿರಣಿ, ಮಾರುತಿ ಭೋವಿ, ಇದ್ದರು

LEAVE A REPLY

Please enter your comment!
Please enter your name here

error: Content is protected !!