Home Uncategorized ಗುರುಮಠಕಲ್ ನ ರೈಸ್ ಮೀಲ್ ಗಳಲ್ಲಿ ಪಡಿತರ ಅಕ್ಕಿ 4198ಕ್ವಿಂಟಾಲ್ 1 ಕೋಟಿ 17 ಲಕ್ಷ ರೂಪಾಯಿ ಮೌಲ್ಯದ ಅಕ್ಕಿ ಜಪ್ತಿ

ಗುರುಮಠಕಲ್ ನ ರೈಸ್ ಮೀಲ್ ಗಳಲ್ಲಿ ಪಡಿತರ ಅಕ್ಕಿ 4198ಕ್ವಿಂಟಾಲ್ 1 ಕೋಟಿ 17 ಲಕ್ಷ ರೂಪಾಯಿ ಮೌಲ್ಯದ ಅಕ್ಕಿ ಜಪ್ತಿ

0
ಗುರುಮಠಕಲ್ ನ   ರೈಸ್ ಮೀಲ್ ಗಳಲ್ಲಿ ಪಡಿತರ ಅಕ್ಕಿ 4198ಕ್ವಿಂಟಾಲ್ 1 ಕೋಟಿ 17 ಲಕ್ಷ ರೂಪಾಯಿ ಮೌಲ್ಯದ ಅಕ್ಕಿ  ಜಪ್ತಿ

ಗುರುಮಠಕಲ್ ಪಟ್ಟಣದ ಹೊರಭಾಗದ ಎರಡು ರೈಸ್ ಮೀಲ್ ಗಳಲ್ಲಿ ಪಡಿತರ ಅಕ್ಕಿ ಜಪ್ತಿ ವಿಚಾರ, ಆಹಾರ ಇಲಾಖೆ ಡಿಡಿ ಅನೀಲಕುಮಾರ್ ಡವಳಗಿ ಮಾಹಿತಿ, ಯಾದಗಿರಿ ಜಿಲ್ಲಾಧಿಕಾರಿ ಅವರ ಸೂಚನೆ ಮೆರೆಗೆ ರೈಸ್ ಮೀಲ್ ಗಳ ಮೇಲೆ ದಾಳಿ ಮಾಡಲಾಗಿತ್ತು, ದಾಳಿ ಮಾಡಿ ಮೂರು ದಿನಗಳ ಕಾಲ ಅಧಿಕಾರಿಗಳ ತಂಡದೊಂದಿಗೆ ಶೋಧ ಕಾರ್ಯಾಚರಣೆ ಮಾಡಿದ್ದೆವೆ, ಸುಮಾರು 4198 ಕ್ವಿಂಟಾಲ್ ಪಡಿತರ ಅಕ್ಕಿ ಪತ್ತೆಯಾಗಿದ್ದು ಅಕ್ಕಿ ಜಪ್ತಿ ಮಾಡಲಾಗಿದೆ, ಸುಮಾರು 1 ಕೋಟಿ 17 ಲಕ್ಷ ರೂಪಾಯಿ ಮೌಲ್ಯದ ಅಕ್ಕಿ ಜಪ್ತಿ ಮಾಡಲಾಗಿದೆ, ಶ್ರೀ ಲಕ್ಷ್ಮಿ ವೆಂಕಟೇಶ್ವರ ರೈಸ್ ಮೀಲ್ ಹಾಗೂ ಶ್ರೀ ಲಕ್ಷ್ಮಿ ಬಾಲಾಜಿ ರೈಸ್ ಮೀಲ್ ಮೇಲೆ ದಾಳಿ ಮಾಡಲಾಗಿದೆ, ನರೇಂದ್ರ ರಾಠೋಡ ಹಾಗೂ ಅವರ ಪುತ್ರ ಅಯ್ಯಪ್ಪ ರಾಠೋಡ ಅವರ ಮಾಲಿಕತ್ವದ ರೈಸ್ ಮೀಲ್ ಗಳು ಇರುವದು ಕಂಡು ಬಂದಿದೆ, ರೈಸ್ ಮೀಲ್ ಮಾಲಿಕರು ಪರಾರಿಯಾಗಿದ್ದು ಯಾವುದೇ ದಾಖಲೆಗಳು ಕೊಟ್ಟಿಲ್ಲ, ಪಡಿತರ ಅಕ್ಕಿ ಪಾಲೀಸ್ ಮಾಡಿ ವಿದೇಶಕ್ಕೆ ಮಾರಾಟ ಮಾಡುವದು ಗೊತ್ತಿಲ್ಲ, ಬೆರೆ ರಾಜ್ಯದ ಪಡಿತರ ಅಕ್ಕಿ ಇರುವದು ಬಂದಿದೆ, ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡುತ್ತೆವೆಂದ ಆಹಾರ ಇಲಾಖೆ ಡಿಡಿ ಅನೀಲಕುಮಾರ್ ಡವಳಗಿ ಗುರುಮಠಕಲ್ ಹೊರಭಾಗದ ಎರಡು ರೈಸ್ ಮೀಲ್ ಗಳ ಮೇಲೆ ದಾಳಿ ಕೇಸ್, ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು ರೈಸ್ ಮೀಲ್ ಮೇಲೆ ಅಧಿಕಾರಿಗಳ ದಾಳಿ ಪ್ರಕರಣ, ಎರಡು ರೈಸ್ ಮೀಲ್ ನಲ್ಲಿ 1 ಕೋಟಿ 17 ಲಕ್ಷ ಮೌಲ್ಯದ 4198 ಕ್ವಿಂಟಾಲ್ ಅಕ್ಕಿ ಪತ್ತೆ, ಅಕ್ರಮ ದಾಸ್ತಾನು ಮಾಡಿಕೊಂಡಿದ್ದ ಅಕ್ಕಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ ಅಧಿಕಾರಿಗಳು, ಬಿಜೆಪಿ ಮುಖಂಡ ಮಣಿಕಂಠ ರಾಠೋಡ ತಂದೆ ಹಾಗೂ ಸಹೋದರನ ಮೇಲೆ ಕೇಸ್ ದಾಖಲು, ನರೇಂದ್ರ ರಾಥೋಡ, ಅಯ್ಯಪ್ಪ ರಾಥೋಡ ,ಚಂದ್ರಿಕಾ ಹಾಗೂ ಲಕ್ಷ್ಮಿಬಾಯಿ ರಾಠೋಡ ವಿರುದ್ಧ ಕೇಸ್ ದಾಖಲು, ಆಹಾರ ಇಲಾಖೆ ಡಿಡಿ ಅನೀಲಕುಮಾರ್ ಡವಳಗಿ ಅವರಿಂದ ಗುರುಮಠಕಲ್ ಠಾಣೆಗೆ ದೂರು ಕೇಸ್ ದಾಖಲು, ಕೇಸ್ ದಾಖಲಿಸಿದ ಆಹಾರ ಇಲಾಖೆ ಅಧಿಕಾರಿಗಳು ಗುರುಮಠಕಲ್ ಠಾಣೆಯಲ್ಲಿ ಪ್ರಕರಣ ದಾಖಲು, ದಾಳಿ ವೇಳೆ ವಿವಿಧ ಬ್ರಾಂಡ್ ಗಳ ಖಾಲಿ ಚೀಲಗಳು, ಎರಡು ಲಾರಿ,ಹಳದಿ ಬಣ್ಣದ ನೋಟ್ ಬುಕ್,ಎರಡು ರೈಸ್ ಮೀಲ್ ಗಳು ಸೀಜ್ ಪಡಿತರ ಅಕ್ಕಿ ಜಪ್ತಿ ಕೇಸ್ ಮಹತ್ವದ ದಾಖಲೆ ಅಧಿಕಾರಿಗಳಿಗೆ ಲಭ್ಯ, ದಾಳಿ ವೇಳೆ ಹಳದಿ ಬಣ್ಣದ ನೋಟ್ ಬುಕ್ ಪತ್ತೆ, ಪಡಿತರ ಅಕ್ಕಿ ಪಾಲೀಶ್ ಮಾಡಿ ಲಾರಿಗಳಿಗಳಲ್ಲಿ ಸಾಗಾಟದ ಬಗ್ಗೆ ಬುಕ್ ನಲ್ಲಿ ಉಲ್ಲೇಖ, ರೈಸ್ ಮೀಲ್ ನಲ್ಲಿ ಪಾಲೀಶ್ ಮಾಡಿದ ಅಕ್ಕಿ, ಬೆರೆ ಬೆರೆ ರಾಜ್ಯದ ಲಾರಿಯಲ್ಲಿ ಭಾರಿ ಪ್ರಮಾಣದ ಅಕ್ಕಿ ಸಾಗಾಟದ ಬಗ್ಗೆ ಉಲ್ಲೇಖ, ಅಕ್ಕಿ ಸಾಗಾಟದ ಬಗ್ಗೆ ಲಾರಿ ನಂಬರ್ ಮಾತ್ರ ಉಲ್ಲೇಖ, ಗುಜರಾತ್, ಮುಂಬೈ,ಹೈದ್ರಾಬಾದ್ ಸೇರಿದಂತೆ ಮೊದಲಾದ ಕಡೆ ಸಾಗಾಟ ಮಾಡಿರುವ ಬಗ್ಗೆ ಮಾಹಿತಿ ಸಿಗುವ ಸಾಧ್ಯತೆ, ಪಡಿತರ ಅಕ್ಕಿ ಪಾಲೀಶ್ ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡಿರುವ ಬಗ್ಗೆ ತನಿಖೆಗೆ ಮಹತ್ವದ ಪುರಾವೆ ಲಭ್ಯ, ಈಗಾಗಲೇ ನೋಟ್ ಬುಕ್ ಜಪ್ತಿ ಮಾಡಿರುವ ಅಧಿಕಾರಿಗಳ ತಂಡ, ನೋಟ್ ಬುಕ್ ನಿಂದ ಮತ್ತಷ್ಟು ಕಳ್ಳದಂಧೆ ಬೆಳಕಿಗೆ ಬರುವ ಸಾಧ್ಯತೆ

LEAVE A REPLY

Please enter your comment!
Please enter your name here

error: Content is protected !!