Google search engine
ಮನೆಉದ್ಯೋಗಗಳು - ಫಲಿತಾಂಶಗಳುದೇಶ ಸೇವೆ ಮುಗಿಸಿ ತಾಯ್ನಾಡಿಗೆ ಮರಳಿದ ಯೋಧನಿಗೆ ಅದ್ದೂರಿ ಸ್ವಾಗತ

ದೇಶ ಸೇವೆ ಮುಗಿಸಿ ತಾಯ್ನಾಡಿಗೆ ಮರಳಿದ ಯೋಧನಿಗೆ ಅದ್ದೂರಿ ಸ್ವಾಗತ

ದೇಶ ಸೇವೆ ಮುಗಿಸಿ ತಾಯ್ನಾಡಿಗೆ ಮರಳಿದ ಯೋಧನಿಗೆ ಅದ್ದೂರಿ ಸ್ವಾಗತ

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಪಡಸಾವಳಿ ಗ್ರಾಮದಲ್ಲಿ ಯೋಧನಿಗೆ ಹೂವಿನ ಸುರಿಮಳೆ.

 

ದೇಶದ ಗಡಿಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿ ಹುಟ್ಟೂರಿಗೆ ವಾಪಸಾದಾ ಸೈನಿಕನಿಗೆ ಇಡೀ ಊರೇ ಹೂಮಳೆಗೆರೆದು ಸ್ವಾಗತ ಕೋರಿತು. ಅದ್ದೂರಿ ಮೇರವಣಿಗೆ ನಡೆಸಿ ಹಬ್ಬವನ್ನೆ ಆಚರಿಸಿತ್ತು. ಅಂದಹಾಗೆ ಈ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು ಎಲ್ಲಿ ಅಂತಿರಾ ಈ ಸ್ಟೊರಿ ನೋಡಿ

 

ಎಲ್ಲೆಂದರಲ್ಲಿ ರಾರಾಜಿಸುತ್ತಿರುವ ತ್ರಿವರ್ಣ ಧ್ವಜಗಳು, ಒಂದೇ ಮಾತರಂ ಎಂದು ಘೋಷಣೆ ಕೂಗಿತ್ತಿರುವ ಯುವಕರು, ತೆರೆದ ವಾಹನದಲ್ಲಿ ಜನರತ್ತ ಕೈಬಿಸುತ್ತಿರುವ ವೀರ ಯೋಧ. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಪಡಸಾವಳಿ ಗ್ರಾಮದಲ್ಲಿ, 40 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ತವರಿಗೆ ವಾಪಸ್ಸಾದ ವೀರ ಯೋಧ ಸಿದ್ದರಾಮ ಮುನ್ನೊಳಿ ಅವರನ್ನು ಗ್ರಾಮಸ್ಥರೆಲ್ಲ ಸೇರಿ ಅದ್ದೂರಿಯಾಗಿ ಸ್ವಾಗತಿಸಿದರು‌. ನಗರದ ತುಂಬೆಲ್ಲ ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ ನಡೆಸಿ ದೇಶಾಭಿಮಾನ ಮೆರೆದ್ರು

 

ಬಳಿಕ ನಡೆದ ಸಮಾರಂಭದಲ್ಲಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್, ಡಾ. ಶಂಭುಲಿಂಗ ಶಿವಾಚಾರ್ಯರು, ಮಾಜಿ ಸೈನಿಕರು, ಗ್ರಾಮದ ಗಣ್ಯರು ಭಾಗವಹಿಸಿ ನಿವೃತ್ತ ಯೋಧ ಸಿದ್ದರಾಮ ಅವರಿಗೆ ಅಭಿನಂದನೆ ಸಲ್ಲಿಸಿದರು.

 

ಮನೆಯಲ್ಲಿ ಅದೆಷ್ಟೇ ಕಷ್ಟ ಇದ್ದರೂ ಸಹ ನನಗೆ ದೇಶಸೇವೆಯೆ ಮುಖ್ಯ ಎಂದು ಯೋಧ ಸಿದ್ದರಾಮ ಅವರು ಛಲ ಬಿಡದೆ 40 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ, ದೇಶದ ನಾನಾ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿ, ರಾಷ್ಟ್ರಪತಿ ಪದಕವನ್ನು ಪಡೆದು ಸೈ ಎನಿಸಿಕೊಳ್ಳುವ ಮೂಲಕ ಯುವಕರಿಗೆ ಮಾದರಿಯಾಗಿದ್ದಾರೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!