ಜೇವರ್ಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮೈಸೂರಿನ ಪರಂಪರೆ ಸಂಸ್ಥಯ ಸಹಯೋಗದಲ್ಲಿ ಜೇವರ್ಗಿಯ ಟೌನ್ ಹಾಲ್ ಹಳೆ ತಹಸೀಲ್ ಕಛೇರಿಯ ಆವರಣದಲ್ಲಿರುವ ಕನ್ನಡ ಭವನದಲ್ಲಿ ರಾಜ್ಯಮಟ್ಟದ ಗಮಕ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕ ಶಾಂತಲಿಂಗ ಪಾಟೀಲ್ ತಿಳಿಸಿದ್ದಾರೆ
ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಜೇವರ್ಗಿ ತಾಲೂಕಿನ ಗಮಕ ಸಮ್ಮೇಳನದ ಸಂಚಾಲಕ ಶಾಂತಲಿಂಗ ಪಾಟೀಲ್ ಇದೇ ತಿಂಗಳ 21 ಮತ್ತು 22 ನೇ ತಾರೀಖಿನಂದು ನಡೆಯಲಿರುವ ರಾಜ್ಯಮಟ್ಟದ ಗಮಕ ಸಮ್ಮೇಳನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇವರ್ಗಿ ಶಾಸಕರು ಮತ್ತು ಕೆಕೆಆರ್’ಡಿಬಿ ಅಧ್ಯಕ್ಷರಾದ ಡಾ. ಅಜಯ್ ಸಿಂಗ್ ಅವರು ವಹಿಸಿಕೊಂಡಿದ್ದು, ಈ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಡಾ.ಎವಿ ಪ್ರಸನ್ನಕುಮಾರ ಅವರು ವಹಿಸಿಕೊಳ್ಳಲಿದ್ದಾರೆ. ಇನ್ನು ಈ ಸಮ್ಮೇಳನದಲ್ಲಿ ವಿಜಕುಮಾರ ಪಾಟೀಲ ತೇಗಲತಿಪ್ಪಿ, ಕೃಷ್ಣಾಜಿ ಕುಲಕರ್ಣಿ, ನಾಡೋಜ ಮಹೇಶ ಜೋಶಿ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ
ಸುದ್ದಿಗೋಷ್ಟಿಯಲ್ಲಿ ಪ್ರಹ್ಲಾದ ಮಠಮಾರೆ, ಪ್ರಕಾಶ ಕುಲಾರೆ, ಭೀಮರೆಡ್ಡಿ, ಎ.ವಿ ಬಿರಾದಾರ ಭಾಗವಹಿಸಿದ್ದರು