ಕಲಬುರಗಿ ನಗರದ ಆಳಂದ ರಸ್ತೆಯ ವಿಜಯನಗರ ಕಾಲೋನಿಯಲ್ಲಿನ ಐವತ್ತು ವರ್ಷಗಳ ಪುರಾತನ ವಿಗ್ನೇಶ್ವರ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ಶರಣ ಚರಿತಾಮೃತ ಪ್ರವಚನ ಕಾರ್ಯಕ್ರಮ ನಡೆಸಲಾಯಿತು
ಕಲ್ಪತರು ಸೇವಾ ಸಂಘದ ವತಿಯಿಂದ ನಿರ್ಮಾಣಗೊಂಡ ವಿಗ್ನೇಶ್ವರ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗಣೇಶೋತ್ಸವ ಪ್ರಯುಕ್ತ ಗಣೇಶ ಮೂರ್ತಿ ಪ್ರತಿಷ್ಟಾಪಿಸಿದ್ದು, ಎರಡನೇ ದಿನದ ಪೂಜಾ ಕಾರ್ಯಕ್ರಮವನ್ನು ಡಾ. ಪಂಚಾಕ್ಷರಿ ಪುಟ್ಟರಾಜ ಕವಿ ಶಿವಯೋಗಿಗಳ ಶಿಷ್ಯರಾದ ಹಿರೇಮಠ ಸಂಸ್ಥಾನ ಸುಂಟನೂರಿನ ವೇದಮೂರ್ತಿ ಸಿದ್ದೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ನಂತರ ಸ್ವಾಮಿಜಿಗಳು ಶರಣ ಚರಿತಾಮೃತ ವಿಷಯದ ಕುರಿತು ಪ್ರವಚನ ನೀಡಿದರು. ಪ್ರವಚನಕ್ಕೆ ಆಕಾಶವಾಣಿಯ ಹಾರ್ಮೋನಿಯಮ್ ಕಲಾವಿದರಾದ ಗುರುಶಾಂತಯ್ಯ ಹಿರೇಮಠ ಅವರು ಸಂಗೀತದ ಸಾಥನ್ನ ನೀಡಿದರೆ ತಬಲಾ ಮಾಂತ್ರಿಕರಾದ ಜಗದೀಶ ದೇಸಾಯಿ ಕಲ್ಲೂರು ಅವರು ತಬಲಾ ವಾದ್ಯದ ನಾದವನ್ನು ಜನಮಾನಸದಲ್ಲಿ ಮೂಡುವಂತೆ ಮಾಡಿದರು. ನಂತರ ಮಾತನಾಡಿದ ಸ್ವಾಮೀಜಿಗಳು ಇಲ್ಲಿನ ದೇವಸ್ಥಾನವು ಐವತ್ತು ವರ್ಷಗಳ ಪುರಾತನ ದೇವಸ್ಥಾನವಾಗಿದ್ದು ಈ ದೇವಸ್ಥಾನದಲ್ಲಿ ಕಳೆದ ಐದು ವರ್ಷಗಳ ಹಿಂದೆ ಅಯೋಧ್ಯೆಯ ರಾಮ ಮೂರ್ತಿಯನ್ನು ಕೆತ್ತಿದ ವಂಶಸ್ಥರಿಂದ ಕೆತ್ತಿದ ವಿಗ್ನೇಶ್ವರನ ಶಿಲಾ ಮೂರ್ತಿಯನ್ನು ಇಲ್ಲಿ ಪ್ರತಿಷ್ಟಾಪಿಸಲಾಗಿದೆ ಆದ ಕಾರಣ ಎಲ್ಲಾ ಭಕ್ತಾದಿಗಳು ಇಲ್ಲಿನ ವಿಗ್ನೇಶ್ವರನ ದರ್ಶನ ಪಡೆದು ಪನೀತರಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಮೀಟಿಯ ಅಧ್ಯಕ್ಷರು ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸಂತೋಷ್ ಪಾಟೀಲ್, ಉಪಾಧ್ಯಕ್ಷರಾದ ಡಾ.ಸಂತೋಷ ಕೋಟನೂರ, ಸೆಕ್ರೆಟ್ರಿ ಮುನಿಕುಮಾರ ಹಿರೇಮಠ, ಸೋಮದತ್ತ ಪಾಟೀಲ್ ಸೇರಿದಂತೆ ಕಾಲೋನಿಯಲ್ಲಿನ ಮಹಿಳೆಯರು, ಹಿರಿಯರು, ಮುದ್ದುಮಕ್ಕಳು ಸೇರಿದಂತೆ ಹಲವರು ಪ್ರವಚನ ಆಲಿಸಿದರು