ಹದಿನೈದು ದಿನಗಳಲ್ಲಿ ಎಲ್ಲಾ ಗುಂಡಿಗಳನ್ನು ಮುಚ್ಚಲೇಬೇಕು. ಮುಚ್ಚಿಲ್ಲ ಅಂದರೆ ಕ್ರಮ ತೆಗೆದುಕೊಳ್ಳುತ್ತೇನೆ.
ಸಾರ್ವಜನಿಕರಿಂದ ಯಾವುದೇ ದೂರು ಬರಬಾರದು. ಬಂದರೆ ಅಧಿಕಾರಿಗಳೇ ನೇರ ಹೊಣೆ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ವಾರ್ನಿಂಗ್ ಮಾಡಿದ್ದಾರೆ. ಹೌದು. ಸೆಪ್ಟಂಬರ್ 15ರ ವರೆಗೆ ಗಡುವು ಕೊಟ್ಟಿದ್ದೇನೆ. ನಂತರ ನಾನೇ ಸಿಟಿ ರೌಂಡ್ ಹಾಕುತ್ತೇನೆ. ಬೇಗ ಗುಂಡಿ ಮುಚ್ಚಬೇಕು. ಏನಾದರೂ ಸಮಸ್ಯೆಯಾದರೆ ಎಷ್ಟು ಜನ ಅಧಿಕಾರಿಗಳು ಸಸ್ಪೆಂಡ್ ಆಗುತ್ತಾರೆ ಗೊತ್ತಿಲ್ಲ ಎಂದರು.