ನೂತನವಾಗಿ ಆಯ್ಕೆಯಾದ ಸೇಡಂ ಪುರಸಭಾ ಅದ್ಯಕ್ಷರು ಹಾಗೂ ಉಪಾಧ್ಯಕ್ಷರು ಸೇಡಂ ಪಟ್ಟಣ ಅಭಿವೃದ್ಧಿ ಮಾಡಬೇಕೆಂದು ಸಚಿವ ಡಾ ಶರಣಪ್ರಕಾಶ ಪಾಟೀಲ ಹೇಳಿದರು
ಸೇಡಂ ಪಟ್ಟಣದ ಪುರಸಭೆಗೆ ಎರಡನೇ ಬಾರಿಗೆ ನಡೆಯಬೇಕ್ಕಿದ್ದ ಚುನಾವಷೆ ಅವಿರೋಧ ಆಯ್ಕೆಯಾಗಿದೆ.
ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷದ ವಾರ್ಡ ನಂಬರ್ 6 ವೀರೇಂದ್ರ ರುದ್ನೂರ, ವಾರ್ಡ ನಂಬರ್ 4 ಸೈಜಾದಬೀ ಇಬ್ರಾಹಿಂಮಸಾಬ ನಾಡೆಪಲ್ಲಿ ಅವಿರೋದ ಆಯ್ಕೆಯಾಗಿದಕ್ಕೆಸಂತೋಷ ತಂದಿದೆ ಅದ್ಯಕ್ಷ, ಉಪಾಧ್ಯಕ್ಷರು ಕಾಂಗ್ರೆಸ್ ಸದಸ್ಯರಿಗೆ ಹಾಗೂ ಪ್ರಮುಖ ಕಾಂಗ್ರೆಸ್ ನಾಯಕರಿಗೆ, ಕಾರ್ಯಕರ್ತರ ನಿರ್ಣಯ ತೆಗೆದುಕೊಂಡು ಸೇಡಂ ಪಟ್ಟಣ ಅಭಿವೃದ್ಧಿ ಮಾಡಬೇಕೆಂದರು.ಅಧಿಕಾರಿ ತಹಶಿಲ್ದಾರ ಶ್ರೀಯಾಂಕ ಧನಶ್ರೀ ಅವರು ಅವಿರೋಧ ಆಯ್ಕೆ ಘೋಷಿಸಿದರು.ಪುರಸಭೆ ಅದ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿಯ ಒಬ್ಬ ಸದಸ್ಯರು ಭಾಗಿಯಾಗಲಿಲ್ಲ
ಈ ಸಂಧರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಶರಣಯ್ಯಸ್ವಾಮಿ ಸಂಸದ ರಾದಕೃಷ್ಣ ದೊಡ್ಡಮನಿ, ರಾಜ್ಯ ತೋಟಗಾರಿಕೆ ಮಹಾಮಂಡಳಿ ಮಾಜಿ ರಾಜ್ಯಾದ್ಯಕ್ಷ ಬಸವರಾಜ ಪಾಟೀಲ ಊಡಗಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಾಗೇಶ್ವರರಾವ ಪಾಟೀಲ, ಸೇಡಂ ಬ್ಲಾಕ್ ಅದ್ಯಕ್ಷ ಶಿವಶರಣರೆಡ್ಡಿ ಪಾಟೀಲ, ಮುಧೋಳ ಬ್ಲಾಕ್ ಅದ್ಯಕ್ಷ ರವಿಂದ್ರ ನಂದಿಗಾಮ, ಮಾಜಿ ಕಾಡಾ ಅದ್ಯಕ್ಷ ಮಹಾಂತಪ್ಪ ಸಂಗಾವಿ,ವಾಸವದತ್ತಾ ಸಿಮೆಂಟ್ ಕಾರ್ಖಾನೆಯ ಕಾರ್ಮಿಕ ಸಂಘದ ಅದ್ಯಕ್ಷ ಸತೀಷರೆಡ್ಡಿ ಪಾಟೀಲ ರಂಜೋಳ, ಉದ್ಯಮಿ ರವಿ ಸಾಹು ತಂಬಾಕೆ ಕೋಡ್ಲಾ, ಅಬ್ದುಲ್ ರಶೀದ್ ರಂಜೋಳ, ರಾಜಶೇಖರ ಪುರಾಣಿಕ್, ಜೈಭೀಮ ಊಡಗಿ, ಜಗನ್ನಾಥ ಚಿಂತಪಳ್ಳಿ ಶರಣು ಕಿರಣಿಗಿ ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.