Google search engine
ಮನೆಬಿಸಿ ಬಿಸಿ ಸುದ್ದಿನಾನು ಯಾವುದೇ ಕಾರಣಕ್ಕೂ ಸಿಎ ಸೈಟ್ ಅನ್ನು ದುರ್ಬಳಕೆ ಮಾಡಿಕೊಂಡಿಲ್ಲ ಇನ್ನೂ ಔಷಧ ಭವನದಲ್ಲಿರುವ ಅಂಗಡಿಗಳನ್ನು...

ನಾನು ಯಾವುದೇ ಕಾರಣಕ್ಕೂ ಸಿಎ ಸೈಟ್ ಅನ್ನು ದುರ್ಬಳಕೆ ಮಾಡಿಕೊಂಡಿಲ್ಲ ಇನ್ನೂ ಔಷಧ ಭವನದಲ್ಲಿರುವ ಅಂಗಡಿಗಳನ್ನು ವಾಣಿಜ್ಯ ಬಳಕೆಗೆ ನೀಡಿಲ್ಲ; ದತ್ತಾತ್ರೆಯ ಪಾಟೀಲ್ ರೇವೂರ್

ಸಿಎ ಸೈಟ್ ಮತ್ತು ಔಷಧ ಭವನದ ವಿಚಾರವಾಗಿ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಸ್ಪಷ್ಟನೆ ನೀಡಿದ್ದಾರೆ. ನಾನು ಯಾವುದೇ ಕಾರಣಕ್ಕೂ ಸಿಎ ಸೈಟ್ ಅನ್ನು ದುರ್ಬಳಕೆ ಮಾಡಿಕೊಂಡಿಲ್ಲ ಇನ್ನೂ ಔಷಧ ಭವನದಲ್ಲಿರುವ ಅಂಗಡಿಗಳನ್ನು ವಾಣಿಜ್ಯ ಬಳಕೆಗೆ ನೀಡಿಲ್ಲ. ಅವು ಉಚಿತವಾಗಿ ನಮ್ಮ ಜೌಷಧ ಭವನದಲ್ಲಿ ಕೆಲಸ ಮಾಡುವ ಕಾರ್ಮಿಕರ ಸಂಘಕ್ಕೆ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ

ಕಲಬುರಗಿ ನಗರದಲ್ಲಿ ಮಾತನಾಡಿದ ಕಲಬುರಗಿ ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ದತ್ತಾತ್ರೆಯ ಪಾಟೀಲ್ ರೇವೂರ್ ಅವರು ಅಲ್ಲಮಪ್ರಭು ಪಾಟೀಲ್ ಅವರು ಹಿರಿಯರು ಅವರು ಶಾಸಕರಾಗಿ ಒಂದು ವರೆ ವರ್ಷವಾಯಿತು. ಆದರೆ ಕ್ಷೇತ್ರವನ್ನು ಅಭಿವೃಧ್ದಿ ಮಾಡುವುದನ್ನು ಬಿಟ್ಟು ಇತ್ತೀಚಿಗೆ ರಾಜಕೀಯವಾಗಿ ಟೀಕೆ ಮಾಡಲು ಮುಂದಾಗಿದ್ದಾರೆ. ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಅಪಾರ ಪ್ರಮಾಣದಲ್ಲಿ ಮಳೆಯಾಗ್ತಿದೆ ಅದರಿಂದ ರೈತರು ಬೆಳೆದ ಹೆಸರು,ಉದ್ದು ಹಾನಿಯಾಗಿದೆ ನೆನ್ನೆ ಪಟ್ಟಣ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡಿದ ಊರಿಂದಲೇ ಹೆಸರು ಹಾಳಾಗಿದ್ದ ಗಿಡವನ್ನು ನಾವು ತೋರಿಸುತ್ತಿದ್ದೇವೆ. ರೈತರ ಗೋಳು ಕೇಳುವುದನ್ನು, ಇನ್ನೂ ತಾರಫೈಲ್, ಬಸವನಗರ, ಸುಂದರ ನಗರ, ಗಾಜಿಪುರ ಬಡಾವಣೆಗಳಲ್ಲಿ ವಾರದಿಂದ ಸತತವಾಗಿ ಸುರಿದ ಮಳೆಯಿಂದಾಗಿ ತೊಂದರೆಯಾಗಿದೆ ಮತ್ತು ಹಿಂದಿನ ಸರ್ಕಾರದಲ್ಲಿ ಸಾಲ ಮನ್ನಾ ಆಗಿರುವ ದುಡ್ಡು ರೈತರ ಖಾತೆಗೆ ಇನ್ನೂ ಬಂದಿಲ್ಲ ಅದೆಲ್ಲವನ್ನು ಬಿಟ್ಟು ಶಾಸಕರು ರಾಜಕೀಯ ಟೀಕೆ ಮಾಡುತ್ತಾರೆ. ನೀವು ಟೀಕೆ ಮಾಡುವ ಎಲ್ಲದರ ಬಗ್ಗೆ ನನ್ನ ಹತ್ತಿರ ನಿಮ್ಮ ಹತ್ತು ಪಟ್ಟು ದಾಖಲೆಗಳಿವೆ. ನಿಮ್ಮ ವಿಚಾರಗಳನ್ನು ಕೂಡ ನಾನು ಸಮಯ ಬಂದಾಗ ಮಾತನಾಡುತ್ತೇನೆ ಆದರೆ ನಮ್ಮ ಸಿಎ ಸೈಟ್ ಬಗ್ಗೆ ಮಾತನಾಡುತ್ತಿದ್ದೀರಿ ನಮ್ಮ ಸಿಎ ಸೈಟ್ ಅನ್ನು ನಾವು ದುರ್ಬಳಕೆ ಮಾಡಿಕೊಂಡಿಲ್ಲ ಅದನ್ನು ಎಲ್ಲಾ ಕಾನೂನಿನ ನಿಯಮದಂತೆಯೆ ಬಳಸಿಕೊಂಡಿದ್ದೇವೆ ಎಂದರು. ಇನ್ನೂ ಒಂದು ಲಕ್ಷ ತೆರಿಗೆ ವಂಚನೆ ಆರೋಪದ ಪ್ರಶ್ನೆಗೆ ಉತ್ತರಿಸಿದ ಅವರು ನೀವು ಶಾಸಕರೋ ಅಥವಾ ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುವ ಕ್ಲರ್ಕ್ ಇದ್ದೀರೋ ಎಂದು ಶಾಸಕರಿಗೆ ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಮಾಜಿ ಮೇಯರ್ ವಿಶಾಲ್ ದರ್ಗಿ, ಅಪ್ಪು ಕಣಕಿ, ರಾಜು ವಾಡೇಕರ್ ಸೇರಿದಂತೆ ಇನ್ನಿತರರು ಇದ್ದರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!