ಯಾದಗಿರಿ ಜಿಲ್ಲಾ ಪಂಚಾಯತ್ ಸಿಇಒ ಆಗಿದ್ದ ಗರೀಮಾ ಫನ್ವಾರ್ ಅವರನ್ನು ನಿನ್ನೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಿಜಿಟಲ್ ಹೆಲ್ತ್ ವಿಭಾಗದ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ. ಇದರ ಪ್ರಯುಕ್ತ ಜಿಲ್ಲಾಧಿಕಾರಿ ಕಚೇರಿಯ ಆಡಿಟೋರಿಯಂ ನಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಗರೀಮಾ ಫನ್ವಾರ್ ಅವರಿಗೆ ಜಿಲ್ಲೆಯ ಮಹಿಳಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಂಪ್ರದಾಯದಂತೆ ಸೀಮಂತ ನೆರೆವೇರಿಸಿದರು. ಗರೀಮಾ ಫನ್ವಾರ್ ಅವರನ್ನು ವೇದಿಕೆಯ ಕುರ್ಚಿ ಮೇಲೆ ಕುರಿಸಿ ಸಂಪ್ರದಾಯದಂತೆ ಹಸಿರು ಸೀರೆ, ಹಸಿರು ಬಳೆ ತೋಡಿಸಿ, ತಲೆಗೆ ದಂಡಿ ಹಾರ ಕಟ್ಟಿ, ಅರಶಿನ-ಕುಂಕುಮ ಹಚ್ಚಿ, ಕೊರಳಿಗೆ ಬೃಹತ್ ಹೂವುನ ಹಾರ ಹಾಕಿ, ಮಡಿಲಲ್ಲಿ ಹನ್ನೊಂದು ನಮೂನೆಯ ಹಣ್ಣು, ಸಿಹಿ ಪದಾರ್ಥಗಳು, ಎಲೆ-ಅಡಿಕೆ ಹಾಗೂ ಉಡಿಯಲ್ಲಿ ಅಕ್ಕಿ ಹಾಕಿ ಸೀಮಂತದಂತೆಯೇ ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು. ಮಹಿಳಾ ಅಧಿಕಾರಿಗಳ ಪ್ರೀತಿ-ಅಭಿಮಾನಕ್ಕೆ ಸಿಇಒ ಗರೀಮಾ ಫನ್ವಾರ್ ಅವರಿಗೆ ತವರು ಮನೆಯಲ್ಲಿ ಸೀಮಂತ ಕಾರ್ಯಕ್ರಮ ಮಾಡಿದಂತಾಯಿತು
ಯಾದಗಿರಿ ಜಿಲ್ಲಾ ಪಂಚಾಯತ್ ಸಿಇಒ ಆಗಿದ್ದ ಗರೀಮಾ ಫನ್ವಾರ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಿಜಿಟಲ್ ಹೆಲ್ತ್ ವಿಭಾಗದ ನಿರ್ದೇಶಕರನ್ನಾಗಿ ವರ್ಗಾವಣೆ
RELATED ARTICLES
Recent Comments
Hello world!
ಮೇಲೆ