ಗೌರವಾನ್ವಿತ ಘನ ನ್ಯಾಯಾಲಯ ನಿರ್ದೇಶನವನ್ನು, ತಿರುಚಿ ಹೇಳಿಕೆ ನೀಡಿ, ನ್ಯಾಯಾಂಗ ನಿಂದನೆ ಮತ್ತು ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿರುವ ಮರೆಪ್ಪ ನಾಯಕ್ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಳವಾರ ಮಹಾಸಭಾದ ಜಿಲ್ಲಾಧ್ಯಕ್ಷ ಚಂದ್ರಕಾಂತ ತಳವಾರ ತಿಳಿಸಿದ್ದಾರೆ.
ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ರಾಜ್ಯ ತಳವಾರ ಮಹಾಸಭಾ ವತಿಯಿಂದ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಗೌರವಾನ್ವಿತ, ಘನ ನ್ಯಾಯಾಲಯವು ಇದೇ ಆಗಸ್ಟ್ 12 ರ 2024 ರಂದು ಮರೆಪ್ಪ ನಾಯಕ್ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೈಗೆತ್ತಿಕೊಂಡು, ನೈಜ ತಳವಾರರಿಗೆ ದಾಖಲೆ ಪರಿಶೀಲಿಸಿ ಜಾತಿ ಪ್ರಮಾಣ ಪತ್ರವನ್ನು ನೀಡುವಂತೆ ಸರಕಾರಕ್ಕೆ ಹಾಗೂ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ ಹೊರತು, ಕಳೆದೆರಡು ದಿನಗಳ ಹಿಂದೆ ಮರೆಪ್ಪ ನಾಯಕ್ ಅವರು ನಡೆಸಿದ ಪತ್ರಿಕಾ ಗೋಷ್ಟಿಯಲ್ಲಿ ಘನ ಹೈಕೋರ್ಟ್ ನ್ಯಾಯಾಲಯದ ನಿರ್ದೇಶನವನ್ನು ತಿರುಚಿ, ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ನ್ಯಾಯಾಲಯದ ನಿಂದನೆ ಆಗುವುದರಲ್ಲಿ ಸಂದೇಹ ಇಲ್ಲ ಎಂದು ಚಂದ್ರಕಾಂತ ತಳವಾರ ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಪೃಥ್ವಿರಾಜ, ಗುರುನಾಥ, ರಾಜೇಂದ್ರ ರಾಜವಾಳ, ಗಿರೀಶ, ಭೀಮಾಶಂಕರ ತಳವಾರ ಸೇರಿದಂತೆ ಹಲವರು ಭಾಗವಹಿಸಿದ್ದರು