Google search engine
ಮನೆUncategorizedಸಿಎ ನಿವೇಶನದ ಬಗ್ಗೆ ಅಲ್ಲಮಪ್ರಭು ಪಾಟೀಲ್ ಸ್ಪಷ್ಟನೆ

ಸಿಎ ನಿವೇಶನದ ಬಗ್ಗೆ ಅಲ್ಲಮಪ್ರಭು ಪಾಟೀಲ್ ಸ್ಪಷ್ಟನೆ

ಸಿಎ ನಿವೇಶನದ ಬಗ್ಗೆ ಅಲ್ಲಮಪ್ರಭು ಪಾಟೀಲ್ ಅವರು ಸ್ಪಷ್ಟನೆ ನೀಡಿದ್ದು, 2005ನೇ ಸಾಲಿನಲ್ಲಿ ಮೊದಲು ಶಿಕ್ಷಕರ ತರಬೇತಿಗಾಗಿ ಪಡೆಯಲಾಗಿತ್ತು, ಆದರೆ ಶಿಕ್ಷಕರ ತರಬೇತಿ ಸ್ಥಗಿತವಾದ ನಂತರ ನಾವು ಜಿಡಿಎ ಅನುಮತಿ ಮೇರೆಗೆ ಕನ್ನಡ ಮಧ್ಯಮ ಶಾಲೆ ನಡೆಸಲು ಸಿಎ ನಿವೇಶನ ಪಡೆದು ಅದರಲ್ಲಿ ನಿಯಮದಂತೆಯೇ ಕನ್ನಡ ಮಾಧ್ಯಮ ಶಾಲೆ ನಡೆಸುತ್ತಿದ್ದೇವೆ ಎಂದು‌ ಹೆರಳಿಕೆ ನೀಡಿದ್ದಾರೆ.

 

ಕಲಬುರಗಿ ನಗರದಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ದರಿಯಾಪೂರ ಕೋಟನೂರನಲ್ಲಿನ ಸರ್ವೆ ನಂಬರ್’ನಲ್ಲಿ ಸಿಎ ನಿವೇಶನ ಸಂಖ್ಯೆ 28ರಲ್ಲಿ 44 ಸಾವಿರದ 300 ಚದರ ಅಡಿ ಜಾಗವು 2005 ನೇ ಸಾಲಿನಲ್ಲಿ ಮೊದಲು ಶಿಕ್ಷಕರ ತರಬೇತಿಗಾಗಿ ಪಡೆಯಲಾಗಿತ್ತು, ಆದರೆ ಶಿಕ್ಷಕರ ತರಬೇತಿ ಸ್ಥಗಿತವಾದ ನಂತರ ನಾವು ಜಿಡಿಎ ಅನುಮತಿ ಮೇರೆಗೆ ಕನ್ನಡ ಮಾಧ್ಯಮ ಶಾಲೆ ನಡೆಸಲು ಸಿಎ ನಿವೇಶನ ಪಡೆದು ಅದರಲ್ಲಿ ನಿಯಮದಂತೆಯೇ ಕನ್ನಡ ಮಾಧ್ಯಮ ಶಾಲೆ ನಡೆಸುತ್ತಿದ್ದೇವೆ. ನಾವು ಯಾವುದೇ ರೀತಿಯ ಆದೇಶ ಉಲ್ಲಂಘನೆ ಮಾಡಿರುವುದಿಲ್ಲ. ಕಾಲೇಜು ಬೇರೆ ಜಾಗದಲ್ಲಿ ಸ್ಥಳಾಂತರ ಮಾಡಲಾಗುವುದು ಆದರೆ ನಮ್ಮ ಬಗ್ಗೆ ಮಾಜಿ ಶಾಸಕರಾದ ದತ್ತಾತ್ರೆಯ ಪಾಟೀಲ್ ರೇವೂರ್ ಅವರು ಹಗುರವಾಗಿ ಮಾತನಾಡುತ್ತಿದ್ದಾರೆ. ಅದೆ ದರಿಯಾಪುರ ಕೋಟನೂರಿನ ಸರ್ವೆ ನಂ.8 ರಲ್ಲಿ 2010 ರಲ್ಲಿ ಸಿಎ ನಿವೇಶನ ಸಂಖ್ಯೆ 11 ಅನ್ನು ಸಮುದಾಯ ಭವನಕ್ಕಾಗಿ ನಿವೇಶನ ಹಂಚಿಕೆ ಮಾಡಿಕೊಂಡು ಅದರಲ್ಲಿ ಕಟ್ಟಡ ನಿರ್ಮಿಸಲು ಸರಕಾರದ ಅನುದಾನ ಬಳಕೆ ಮಾಡಿಕೊಂಡು ಸಮುದಾಯ ಭವನ ಎಲ್ಲಾ ಜನರಿಗೂ ಸೌಲಭ್ಯ ನೀಡದೆ ಅವರೆ ಅಧ್ಯಕ್ಷರಾಗಿರುವ ಗುಲಬರ್ಗಾ ಡಿಸ್ಟ್ರಿಕ್ಟ್ ಕೆಮಿಸ್ಟ್ರಿ ಡ್ರಗ್ಗಿಸ್ಟ್ ಅಸೋಸಿಯೇಷನ್ ಕಟ್ಟಡದಲ್ಲಿ ಎದುರುಗಡೆ ವಾಣಿಜ್ಯ ಮಳಿಗೆ ಮಾಡಿ ಬಾಡಿಗೆ ಪಡೆಯುತ್ತಿದ್ದಾರೆ ಹಾಗೆಯೆ ಸಮುದಾಯ ಭವನಕ್ಕೂ ಬಾಡಿಗೆ ಕೊಟ್ಟು ಆದಾಯ ಪಡೆಯುತ್ತಿದ್ದಾರೆ ಇದು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರವು ವಿಧಿಸಿದ ಷರತ್ತುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದಿದ್ದಾರೆ

 

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!